×
Ad

ದೇವದುರ್ಗ | ಬೀದಿಬದಿ ವ್ಯಾಪಾರಿಗಳ ತಾಲೂಕು ಅಧ್ಯಕ್ಷರಾಗಿ ಮರಿಯಪ್ಪ ಆಯ್ಕೆ

Update: 2025-12-08 17:28 IST

ದೇವದುರ್ಗ : ದೇವದುರ್ಗ ಪ್ರವಾಸಿ ಮಂದಿದಲ್ಲಿ ಜಿಲ್ಲಾ‌ ಕರ್ನಾಟಕ ಪ್ರದೇಶ ಬೀದಿಬದಿ ವ್ಯಾಪಾರಿಗಳ ಒಕ್ಕೂಟದ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಯೇಸು ಮಿತ್ರ ಮತ್ತು ಶ್ರೀಮತಿ ನಂದಕಿಶೋರ ಹಮ್ಮಿಕೊಂಡ ಸಭೆಯಲ್ಲಿ ಎಲ್ಲಾ ವ್ಯಾಪಾರಿಗಳು ಆಗಮಿಸಿ ಬೀದಿ ಬದಿ ವ್ಯಾಪಾರಿಗಳಿಗೆ ಆಗುವ ಸಮಸ್ಯೆಗಳ ಕುರಿತು ಚರ್ಚೆ ಮತ್ತು ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುವ ಕುರಿತಾಗಿ ಮತ್ತು ಪುರಸಭೆ ವತಿಯಿಂದ ಬೀದಿಬದಿ ವ್ಯಾಪಾರಿಗಳಿಗೆ ನೀಡುವ ಗುರುತಿನ ಚೀಟಿ ಹಾಗೂ ಪಿಎಂ ಸ್ವ ನಿಧಿ ಯೋಜನೆಯನ್ನು ಸದುಪಯೋಗ ಪಡೆದುಕೊಳ್ಳಲು ಸಭೆಯಲ್ಲಿ ಚರ್ಚಿಸಿದರು.

ಈ ವೇಳೆ ಸರ್ವಾನುಮತದಿಂದ ತಾಲೂಕು ಅಧ್ಯಕ್ಷರಾಗಿ ಮರಿಯಪ್ಪ, ಉಪಾಧ್ಯಕ್ಷರಾಗಿ ಮುಕ್ಕಣ್ಣ ಪೂಜಾರಿ, ಜಾಕೀರ ಹುಸೇನ್, ರಾಮಪ್ಪ ಬೊಳಿ, ಪ್ರಧಾನ ಕಾರ್ಯದರ್ಶಿಯಾಗಿ ಪರಶುರಾಮ, ಸಹ- ಕಾರ್ಯದರ್ಶಿಯಾಗಿ ಖದೀರ್ ಪಾಷ, ಶರಣಪ್ಪ ಮ್ಯಾದರ, ಹನುಮಂತ್ರಾಯ ನಾಯಕ್, ಫಜಲ್ ಪಾಷ, ಪರಶುರಾಮ, ಇಸ್ಮಾಯಿಲ್, ಪೀರಸಾಬ ದೊಂಡಂಬಳಿ, ಮೌಲಾಸಾಬ,ಹಸನ‌‌ ಅಂಜಳ ಆಯ್ಕೆ ಆಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News