×
Ad

ರಾಯಚೂರು | ಬೆಳಗಾವಿ ಅಧಿವೇಶನದಲ್ಲಿ ಕಲ್ಯಾಣ ಕರ್ನಾಟಕ, ರೈತರ ಸಮಸ್ಯೆಗಳ ಕುರಿತು ಚರ್ಚಿಸಲು ಜೆಡಿಎಸ್ ಪ್ರತಿಭಟನೆ

Update: 2025-12-08 17:25 IST

ರಾಯಚೂರು: ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಅವರು ಕುರ್ಚಿ ಕಾದಾಟ ಬಿಟ್ಟು ಬೆಳಗಾವಿ ಅಧಿವೇಶನದಲ್ಲಿ ರೈತರ ಸಮಸ್ಯೆಗಳನ್ನು ಚರ್ಚಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಜನತಾದಳ ರಾಯಚೂರು ಗ್ರಾಮೀಣ ಘಟಕದ ವತಿಯಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು.

ಕಳೆದ ಒಂದು ವರ್ಷದಿಂದ ರೈತರು ಸಂಪೂರ್ಣವಾಗಿ ಸಂಕಷ್ಟದಲ್ಲಿದ್ದಾರೆ. ಕಳೆದ ಬಾರಿ ಬಹಳಷ್ಟು ಮಳೆಯಿಂದ ಅತಿವೃಷ್ಟಿಯಾದಾಗ ಆಗ ಸರ್ಕಾರವು ಅವರಿಗೆ ಯಾವುದೇ ಸಹಾಯಕ್ಕೆ ಧಾವಿಸದೆ ಪರಿಹಾರವನ್ನು ನೀಡಲಿಲ್ಲ. ಇದರಿಂದ ರೈತರ ಜೀವನವು ದುಸ್ತರವಾಗಿದೆ. ಸರ್ಕಾರದಿಂದ ಬೆಂಬಲ ಬೆಲೆ ಘೋಷಣೆ ಆಗದಿರುವ ಕಾರಣಕ್ಕೆ ಮುಕ್ತ ಮಾರುಕಟ್ಟೆಯಲ್ಲಿ ಬೇಕಾಬಿಟ್ಟಿ ಬೆಲೆಗೆ ಹತ್ತಿ ಖರೀದಿಸಲಾಗುತ್ತಿದೆ. ಗುಣಮಟ್ಟದ ನೆಪವೊಡ್ಡಿ ಮನಬಂದ ದರಕ್ಕೆ ಖರೀದಿಸುತ್ತಿದ್ದಾರೆ. ಸರ್ಕಾರದಿಂದ ಹತ್ತಿ ಖರೀದಿಸಬೇಕಾದರೆ ಕೆಲ ಮಾನದಂಡಗಳನ್ನು ನಿಗದಿ ಮಾಡಿದ್ದು, ತೇವಾಂಶ ಪರೀಕ್ಷಿಸಿ ದರ ನಿಗದಿ ಮಾಡಲಾಗುತ್ತದೆ. ಅಲ್ಲದೇ ರೈತರ ಪಹಣಿ, ಆಧಾ‌ರ್ ಕಾರ್ಡ್ ಕಡ್ಡಾಯವಾಗಿ ಸಲ್ಲಿಸಬೇಕಿದ್ದು, ಹತ್ತಿ ಈಗ ಹಸಿ ಇರುವುದರಿಂದ ಸರ್ಕಾರ ಖರೀದಿಗೆ ಹಿಂದೇಟು ಹಾಕುತ್ತಿದೆ ಎಂದು ದೂರಿದರು.

ರಾಜ್ಯದಲ್ಲಿ ರೈತರು ಅತಿ ವೃಷ್ಠಿಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿ ಪರದಾಡುತ್ತಿದ್ದರೂ, ಸಹ ಸಕರಾತ್ಮಕವಾಗಿ ಸ್ಪಂದಿಸಿ ನೆರವಿಗೆ ಬಾರದೆ, ಸಿಎಂ ಕುರ್ಚಿಗಾಗಿ ಕಾಂಗ್ರೆಸ್ಸಿನಲ್ಲೀಗ ಒಬೊಬ್ಬ ಶಾಸಕರಿಗೆ 50 ಕೋಟಿ ರೂ. ಹಣ ಕೊಟ್ಟು ಖರೀದಿಸುವಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಅವರು ಬ್ಯುಸಿಯಾಗಿದ್ದಾರೆ ಎಂದು ದೂರಿದರು.

ಪ್ರತಿಭಟನೆಯಲ್ಲಿ ಜೆಡಿಎಸ್ ಜಿಲ್ಲಾಅಧ್ಯಕ್ಷ ಎಂ.ವಿರುಪಾಕ್ಷಿ, ರಾಜ್ಯ ಪರಿಶಿಷ್ಟ ಉಪಾಧ್ಯಕ್ಷ ನರಸಿಂಹ ನಾಯಕ, ಜಿಲ್ಲಾ ಕಾರ್ಯಾಧ್ಯಕ್ಷ ವಕೀಲ ಎನ್ ಶಿವಶಂಕರ, ರಾಜ್ಯ ಪ್ರಧಾನ ಕಾರ್ಯದರ್ಶಿ ಲಕ್ಷ್ಮಿಪತಿ ಗಾಣದಾಳ, ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ, ಜಂಬುನಾಥ ಯಾದವ್, ನಾಗರಾಜ್ ಗೌಡ, ಅಮರೇಶ ಪಾಟೀಲ ಆಶಾಪೂರ, ಹಂಪಯ್ಯ ನಾಯಕ್, ನರಸಪ್ಪ ಆಶಾಪೂರ, ಭೀಮರೆಡ್ದಿ ಸರ್ಜಾಪೂರ, ಪಿ ರಾಜು, ಅಲಂಬಾಬು, ವೆಂಕಟಸ್ವಾಮಿ ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News