×
Ad

ದೇವದುರ್ಗ | ಸರಕಾರಿ ಕೆಲಸಕ್ಕೆ ಅಡ್ಡಿ ಆರೋಪ : ಗ್ರಾ.ಪಂ ಅಧ್ಯಕ್ಷೆ ನೀಲಮ್ಮ ಪತಿಯ ವಿರುದ್ದ ಪ್ರಕರಣ ದಾಖಲು

Update: 2025-12-08 17:20 IST

ದೇವದುರ್ಗ : ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ದೇವದುರ್ಗ ತಾಲೂಕಿನ ಕ್ಯಾದಿಗೇರಾ ಗ್ರಾಮ ಪಂಚಾಯತ್‌ ಅಧ್ಯಕ್ಷೆ ನೀಲಮ್ಮ ಅವರ ಪತಿ ರಾಜಶೇಖರ ರಾಠೋಡ ಅವರ ವಿರುದ್ದ ಪಿಡಿಒ ಲಿಂಗಪ್ಪ ರಾಠೋಡ ಅವರು ದೇವದುರ್ಗ ಪೊಲೀಸ್ ಠಾಣೆಯಲ್ಲಿ ಡಿ.‌5 ರಂದು ಪ್ರಕರಣ ದಾಖಲಿಸಿದ್ದಾರೆ.

ಅರೋಪಿ ಎ.ಜಿ.ಕಾಲೊನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಅಡುಗೆ ಸಹಾಯಕಿ ಹುದ್ದೆಗೆ ನಾನು ಹೇಳಿದ ಮಹಿಳೆಯನ್ನು ನೇಮಕ ಮಾಡಬೇಕು ಮಾಡದಿದ್ದಲ್ಲಿ ನೀನು ಹೇಗೆ ಕರ್ತವ್ಯ ನಿರ್ವಹಿಸುತ್ತಿ ಎಂದು, ನಾನು ಒಂದು ಕೈ ನೋಡುತ್ತೇನೆ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದನು.

ಲಿಂಗಪ್ಪ ಅವರನ್ನು ನಿಂದಿಸಿ ಗ್ರಾ.ಪಂ‌. ಬಾಗಿಲು ಮುಚ್ಚಿ ಹಲ್ಲೆಗೆ ಯತ್ನ ಮಾಡಿದಾಗ ಗ್ರಾಮ ಪಂಚಾಯತ್‌ ಕಂಪ್ಯೂಟರ್ ಅಪರೇಟರ್ ಜಾನಪ್ಪ ವಾಟರ್ ಮೆನ್, ಮಲ್ಲಿಕಾರ್ಜುನ ಮತ್ತು ಕರವಸೂಲಿಗಾರ ರಂಗನಾಥ ಮದ್ಯಪ್ರವೇಶ ಮಾಡಿ ಗಲಾಟೆ ಬಿಡಿಸಿದ್ದಾರೆ ಎಂದು ಎಫ್.ಐ.ಆರ್ ನಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News