×
Ad

ರಾಯಚೂರು | ಸಿಜೆಐ ಗವಾಯಿ ಮೇಲೆ ಶೂ ಎಸೆತ ಘಟನೆ ಖಂಡಿಸಿ ನ್ಯಾಯವಾದಿಗಳಿಂದ ಕಲಾಪ ಬಹಿಷ್ಕರಿಸಿ ಆಕ್ರೋಶ

Update: 2025-10-08 17:11 IST

ರಾಯಚೂರು : ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರಾದ ಬಿ.ಆರ್ ಗವಾಯಿ ಅವರ ಮೇಲೆ ವಕೀಲ ರಾಕೇಶ್ ಕಿಶೋರ್, ನ್ಯಾಯಾಲಯದ ಕಲಾಪ ನಡೆಸುವ ವೇಳೆ ಶೂ ಎಸೆಯುವ ಯತ್ನ ಮಾಡಿರುವ ಕರಾಳ ಘಟನೆಯನ್ನು ಖಂಡಿಸಿ ರಾಯಚೂರು ನ್ಯಾಯವಾದಿಗಳ ಸಂಘವು ಒಂದು ದಿನ ಕಲಾಪದಿಂದ ದೂರ ಉಳಿದು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಇಂದು ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಸಭೆ ನಡೆಸಿ‌, ಖಂಡನಾ ನಿರ್ಣಯವನ್ನು ಕೈಗೊಂಡು‌ ಆರೋಪಿ ರಾಕೇಶ್ ವಿರುದ್ದ ಕ್ರಮಕ್ಕೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗೆ ಮನವಿ ರವಾನಿಸಿದರು.

ಈ‌ ವೇಳೆ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನ ವಕೀಲರು, ಉಪಾಧ್ಯಕ್ಷ ನಝೀರ್ ಅಹ್ಮದ್, ಪ್ರಧಾನ ಕಾರ್ಯದರ್ಶಿ ಲಕ್ಷ್ಮಪ್ಪ ಭಂಡಾರಿ, ಖಜಾಂಚಿ ಸೈಯದ್ ನವಾಝ್‌ ಪಾಷ, ಹಿರಿಯ ವಕೀಲರಾದ ಮಸ್ಕಿ ನಾಗರಾಜ, ಎಸ್.ಜಿ. ಮಠ, ವೈ ಶ್ರೀಕಾಂತ್ ರಾವ್, ರಾಜಾ ಪಾಂಡುರಂಗ ನಾಯಕ, ಎಚ್. ಜಗದೀಶ್, ಅಂಬಾಪತಿ ಪಾಟೀಲ್, ಎನ್‌ . ಶಿವಶಂಕರ್, ಜಿ.ಎಸ್. ವೀರಭದ್ರಪ್ಪ, ಕರುಣಾಕರ್ ಕಟ್ಟಿಮನಿ, ಜೆ.ಪಿ‌ ಮಾಡಗಿರಿ, ಬಸವರಾಜ ಚಿಕ್ಕಸೂಗೂರು, ಈರಣ್ಣ, ಎಚ್, ದೊಡ್ಡಪ್ಪ, ಜಿ.ಟಿ. ರೆಡ್ಡಿ, ಮೊಕ್ಷರಾಜ್, ಹನುಮಂತಪ್ಪ ಅತ್ತನೂರು, ನಿಂಗಪ್ಪ ಗಲಗ, ತಾಯಪ್ಪ ಭಂಡಾರಿ, ಡಿಜಿಪಿ, ರಾಮನಗೌಡ ಮರ್ಚೆಟಾಳ್, ಮುನ್ನಾ ಕುಮಾರ್, ಮುಹಮ್ಮದ್ ಸುಲ್ತಾನ್, ಶಿವಕುಮಾರ ಮ್ಯಾಗಳಮನಿ, ಜುನೈದ್ ಸೇರಿದಂತೆ ಅನೇಕರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News