×
Ad

ರಾಯಚೂರು | ಹಟ್ಟಿ, ಸಿಂಧನೂರು ಸೇರಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯ ಪಿಎಸ್‍ಐ ವರ್ಗಾವಣೆ

Update: 2025-11-07 19:04 IST

ರಾಯಚೂರು : ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ಪಿಎಸ್‍ಐ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

ಹಟ್ಟಿ ಪೊಲೀಸ್ ಠಾಣೆಯ ಪಿಎಸ್ಐ ಹೊಸಕೇರಪ್ಪ ಕೆ. ಇವರನ್ನು ಕರ್ನಾಟಕ ಲೋಕಾಯುಕ್ತ ಠಾಣೆಗೆ ವರ್ಗಾವಣೆಗೊಳಿಸಿ, ತೆರವಾದ ಸ್ಥಾನಕ್ಕೆ ಬೀದರ್ ಸೈಬರ್ ಠಾಣೆಯ ಪಿಎಸ್ಐ ಶಿವಾನಂದ ಎ.ಗಾಣಿಗೇರ್ ಇವರನ್ನು ನಿಯುಕ್ತಿಗೊಳಿಸಿದೆ.

ಸಿಂಧನೂರು ವೃತ್ತ ಠಾಣೆಯ ಪಿಎಸ್‍ಐ ರಾಘವೇಂದ್ರ ಜಿಎಸ್. ಇವರನ್ನು ಕರ್ನಾಟಕ ಲೋಕಾಯುಕ್ತ ಠಾಣೆಗೆ ವರ್ಗಾವಣೆಗೊಳಿಸಿ, ತೆರವಾದ ಸ್ಥಾನಕ್ಕೆ ಸೈದಾಪೂರ ಪೊಲೀಸ್ ಠಾಣೆಯ ಪಿಎಸ್ಐ ವಿನಾಯಕ ಇವರನ್ನು ನಿಯುಕ್ತಿಗೊಳಿಸಿದೆ.

ರೈಲ್ವೆ ಪೊಲೀಸ್ ಠಾಣೆಯ ಪಿಎಸ್‍ಐ ಬಸವರಾಜ ಗುರುಲಿಂಗಪ್ಪ ತೇಲಿ ಇವರನ್ನು ಡಿಸಿಆರ್‌ಇ ಠಾಣೆಗೆ ವರ್ಗಾವಣೆಗೊಳಿಸಿ, ತೆರವಾದ ಸ್ಥಾನಕ್ಕೆ ಬೀದರ್ ನ ಡಿಎಸ್‍ಬಿ ಠಾಣೆಯ ಪಿಎಸ್ಐ ಮಲ್ಲಿಕಾರ್ಜುನ ಸಿ.ಇಕ್ಕಳಕಿ ಇವರನ್ನು ನಿಯುಕ್ತಿಗೊಳಿಸಿ ಆದೇಶ ಹೊರಡಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News