ರಾಯಚೂರು | ಮೃತ ವಾರಸುದಾರರ ಪತ್ತೆಗೆ ರೈಲ್ವೇ ಪೊಲೀಸರಿಂದ ಮನವಿ
ರಾಯಚೂರು : ಇಲ್ಲಿನ ರೈಲ್ವೇ ಪೊಲೀಸ್ ಠಾಣೆಯ ಲಿಂಗೇರಿ ಮತ್ತು ಯಾದಗಿರಿ ರೈಲ್ವೇ ನಿಲ್ದಾಣಗಳ ಮದ್ಯೆ ರೈಲ್ವೆ ಕೀ.ಮೀ ನಂ; 622/11-13 ಲೂಪ್‌ಲೈನ್‌ನಲ್ಲಿ ಸುಮಾರು 30 ವರ್ಷದ ಅಪರಿಚಿತ ವ್ಯಕ್ತಿಯು ಯಾವುದೋ ಚಲಿಸುವ ರೈಲುಗಾಡಿಯಿಂದ ಆಯಾತಪ್ಪಿ ಕೆಳಗೆ ಬಿದ್ದು ಆಕಸ್ಮಿಕವಾಗಿ ಮೃತಪಟ್ಟಿದ್ದು, ಈ ಕುರಿತು ರಾಯಚೂರು ರೈಲ್ವೆ ಪೊಲೀಸ್ ಠಾಣೆಯ ಯುಡಿಆರ್ ನಂ.14/2025 ಕಲಂ;194 ಬಿ.ಎನ್.ಎಸ್.ಎಸ್ ರೀತಿಯ ಪ್ರಕರಣ ದಾಖಲಿಸಿಕೊಂಡು ವಾರಸುದಾರರ ಪತ್ತೆಗೆ ಮನವಿ ಮಾಡಲಾಗಿದೆ.
ಮೃತನ ಚಹರೆ ಪಟ್ಟಿಯ ವಿವರ;
ವಯಸ್ಸು ಸುಮಾರು 30 ವರ್ಷ, ಎತ್ತರ ಸುಮಾರು 5.7 ಅಡಿ, ಕಪ್ಪು ಮೈಬಣ್ಣ ಸಾಧಾರಣ ಮೈಕಟ್ಟು, ತಲೆ ಬುರುಡೆ ಒಡೆದುಹೋಗಿ ಮುಖ ಚಹರೆಯು ಜಜ್ಜಿ ಹೋಗಿರುತ್ತದೆ. ಒಂದು ನೇರಳೆ ಬಣ್ಣದ ಜಾಕೆಟ್, ಒಂದು ಗುಲಾಬಿ ಬಣ್ಣದ ಶರ್ಟ್, ಒಂದು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ಒಂದು ಕಂದು ಬಣ್ಣದ ಅಂಡರ್ ವೇರ್ ಧರಿಸಲಾಗಿದ್ದು, ಮೃತನ ವಾರಸುದಾರರು ಪತ್ತೆಯಾದಲ್ಲಿ ಅಥವಾ ಸದರಿ ಮೃತನ ಹೋಲಿಕೆಯ ಗಂಡಸು ಕಾಣೆಯಾದ ಪ್ರಕರಣ ದಾಖಲಾಗಿದ್ದಲ್ಲಿ ರಾಯಚೂರು ರೈಲ್ವೇ ಪೊಲೀಸ್ ಠಾಣೆಯ ದೂ.ನಂ: 08532-231716 ಅಥವಾ 9480802111, ರೈಲ್ವೆ ಪೊಲೀಸ್ ಕಂಟ್ರೋಲ್ ರೂಂ: 080-22871291ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಠಾಣೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.