ರಾಯಚೂರು | ಯುವತಿಯ ಹತ್ಯೆ ಆರೋಪಿಗೆ ಕಠಿಣ ಶಿಕ್ಷೆ ಗುರಿಪಡಿಸಲು ಎಸ್ಐಓ ಆಗ್ರಹ
ರಾಯಚೂರು : ಜಿಲ್ಲೆಯ ಸಿಂಧನೂರು ತಾಲೂಕಿನ ಗೌತಮ್ ಲೇಔಟ್ನಲ್ಲಿ ಸರಕಾರಿ ಪದವಿ ಮಹಾವಿದ್ಯಾಲಯ ಎಂಎಸ್ಸಿ ವಿದ್ಯಾರ್ಥಿಯ ಕೊಲೆ ಪ್ರಕರಣ ಫಾಸ್ಟ್ ಟ್ರ್ಯಾಕ್ ಕೋರ್ಟ್ ನಲ್ಲಿ ವಿಚಾರಣೆ ನಡೆಸಿ ಆರೋಪಿಗೆ ಕಠಿಣ ಶಿಕ್ಷೆ ಒದಗಿಸಬೇಕು ಎಂದು ಒತ್ತಾಯಿಸಿ ಸ್ಟೂಡೆಂಟ್ ಇಸ್ಲಾಮಿಕ್ ಅರ್ಗನೈಜೇಶನ್ ಆಫ್ ಇಂಡಿಯಾ ವತಿಯಿಂದ ಲಿಂಗಸೂಗೂರ ಸಹಾಯಕ ಆಯುಕ್ತರ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಬಳಿಕ ಸಂಘಟನೆಯ ಮುಖಂಡರು ಸಹಾಯಕ ಆಯುಕ್ತರ ಕಚೇರಿ ಮುಖಾಂತರ ಸಿಎಂ ಸಿದ್ದರಾಮಯ್ಯ ರವರಿಗೆ ಮನವಿ ಸಲ್ಲಿಸಿದರು.
ಎಂಎಸ್ ಸಿ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿನಿ ಶಿಫಾ ಎನ್ನುವ ಒಂದು ಅಮಾಯಕ ಬಡ ಹೆಣ್ಣು ಮಗಳ ಕತ್ತು ಕೊಯ್ದು ಬರ್ಬರವಾಗಿ ಕೊಲೆ ಮಾಡಿದ ಘಟನೆ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಕೊಲೆ ಆರೋಪಿ ಮುಬೀನ್ ಈಗಾಗಲೇ ಲಿಂಗಸೂಗೂರು ಪೋಲಿಸರಿಗೆ ಶರಣಾಗಿದ್ದು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪೋಲಿಸ್ ಇಲಾಖೆಯು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು.
ಇಂಥ ದುಷ್ಕೃತ್ಯಗಳು ಮರುಕಳಿಸಿದಂತೆ ಪೋಲಿಸ್ ಇಲಾಖೆ ಮತ್ತು ಸರ್ಕಾರ ಸೂಕ್ತ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅಬ್ದುಲ್ ನಯೀಮ್ ,ಅಮ್ಮದ್ ಅಲಿ, ಜಹೀರುದ್ದೀನ್ ಗೌಸ್, ಇಮ್ತ್ತಿಯಾಜ್, ಸಮಾಜದ ಮುಖಂಡರು ಸೇರಿದಂತೆ ಉಪಸ್ಥಿತರಿದ್ದರು.