×
Ad

ರಾಯಚೂರು | ಒಳ‌ಮೀಸಲಾತಿ ವಿಚಾರದಲ್ಲಿ ರಾಜ್ಯ ಸರಕಾರದಿಂದ ಸುಪ್ರೀಂಕೋರ್ಟ್ ತೀರ್ಪು ಕಡೆಗಣನೆ: ಮಹೇಂದ್ರ ಮಿತ್ರ ಆರೋಪ

Update: 2025-09-13 18:55 IST

ರಾಯಚೂರು: ನ್ಯಾ.ನಾಗಮೋಹನ ದಾಸ್ ನೀಡಿದ್ದ ಪರಿಶಿಷ್ಟ ಒಳ ಮೀಸಲು ವರ್ಗಿಕರಣವನ್ನು ಪರಿಗಣಿಸದೇ ಸರ್ಕಾರ ಮೀಸಲಾತಿಯನ್ನು ಅವೈಜ್ಞಾನಿಕವಾಗಿ ಹಂಚಿಕೆ ಮಾಡಿರುವುದು ಸುಪ್ರಿಂಕೋರ್ಟ್‌ ತೀರ್ಪಿನ ವಿರುದ್ದವಾಗಿದ್ದು, ಮಾದಿಗ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕೆಂದು ಡಾ.ಅಂಬೇಡ್ಕರ ಪರಿಶಿಷ್ಟ ಜಾತಿಗಳ ಒಕ್ಕೂಟ ರಾಜ್ಯಾಧ್ಯಕ್ಷ ಮಹೇಂದ್ರ ಕುಮಾರ ಮಿತ್ರ ಹೇಳಿದರು.

ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, ರಾಜ್ಯ ಸರ್ಕಾರ ಒಳ ಮೀಸಲಾತಿ ಹಂಚಿಕೆ ಅನುಪಾತದಿಂದ ಬಲಗೈ ಸಂಬಂಧಿತ ಜಾತಿಗಳಿಗೆ ಶೇ.11 ರಷ್ಟು ಮೀಸಲು ಪಡೆಯುವಂತಾಗಿ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಮಾದಿಗ ಸಂಬಂಧಿತ ಜಾತಿಗಳಿಗೆ ಅನ್ಯಾಯವಾಗಿದೆ. ನ್ಯಾ.ನಾಗಮೋಹನದಾಸ ವರದಿಯಲ್ಲಿ ಪ್ರವರ್ಗ ಇದಲ್ಲಿ ಸೇರ್ಪಡೆ ಮಾಡಿರುವ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂದ್ರ ಬಲಗೈ ಸಂಬಂಧಿಸಿದ ಉಪ ಜಾತಿಗಳಲ್ಲ. ಆದಿ ಆಂದ್ರ ಉಪ ಜಾತಿಯು ಪ್ರವರ್ಗ ಎ ಗುಂಪಿಗೆ ಸೇರ್ಪಡೆ ಮಾಡಲಾಗಿದೆ. ಹಳೆ ಮೈಸೂರು ಬಾಗದಲ್ಲಿ ಮಾದಿಗ ಮತ್ತು ಹೊಲೆಯ ಉಪ ಜಾತಿಗಳು ಆಧಿ ಕರ್ನಾಟಕವೆಂದು, ಎಡಗೈ ಮತ್ತುಬಲಗೈ ಸಂಬಂದಿತ ಉಪಜಾತಿಗಳೆಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ. ಮೂಲ ಜಾತಿ ಯಾವದೆಂದು ತಿಳಿದಿದ್ದರು, ಆದಿ ಆಂದ್ರ, ಆದಿ ಕರ್ನಾಟಕ, ಆದಿ ದ್ರಾವಿಡ ಜಾತಿ ಪ್ರಮಾಣ ಪಡೆದು ಮೀಸಲಾತಿಯನ್ನು ಅನುಭವಿಸಿಕೊಂಡು ಬಂದಿದ್ದಾರೆ. ಇವರ ಮೂಲ ಜಾತಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಇಲ್ಲ. ಇವುಗಳ ಅಧ್ಯಯನ ನಡೆಸಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರಿಸಲು ಸರ್ಕಾರ ಕ್ರಮವಹಿಸಬೇಕೆಂದರು.

ಆದರೆ ಸರ್ಕಾರ ಸಮಾಜ ಕಲ್ಯಾಣ ಇಲಾಖೆ ಹೊರಡಿಸಿರುವ ಆದೇಶದಲ್ಲಿ ಬಲಗೈ ಸಂಬಂಧಿತ ಜಾತಿಗಳಿಗೆ ಪ್ರವರ್ಗ –ಎ ಮತ್ತು ಪ್ರವರ್ಗ ಬಿಗಳಲ್ಲಿ ಮೀಸಲಾತಿ ಪಡೆಯುಬಹುದಾಗಿದೆ. ಸಮಾಜ ಕಲ್ಯಾಣ ಇಲಾಖೆ ಪ್ರವರ್ಗ ಬಿಯಲ್ಲಿನ ಬಲಗೈ ಸಂಬಂಧಿಸಿತ 17 ಉಪ ಜಾತಿಗನ್ನು ಪ್ರವರ್ಗ ಸಿ ರಲ್ಲಿ ತಪ್ಪಾಗಿ ಸೇರಿಸಿದ್ದರಿಂದ ಅನ್ಯಾಯವಾಗಲಿದ್ದು, ಪ್ರವರ್ಗ ಬಿರಲ್ಲಿ ಸೇರಿಸಿ ನ್ಯಾಯ ನೀಡಬಹುದು ಎMದರು.

ಸುಪ್ರಿಂಕೋರ್ಟಿನ ತೀರ್ಪಿನಂತೆ ಸಮುದಾಯ ಜನಸಂಖ್ಯೆ ಹಂಚಿಕೆ ಅನ್ಯಾಯದೊಂದಿಗೆ ಕೆನೆಪದರ ವಿಷಯ ಕುರಿತು ಯಾವುದೇ ನಿರ್ಧಾರ ಕೈಗೊಳ್ಳದೇ ಇರುವದು ಆದೇಶ ವಿರುದ್ದದ ತೀರ್ಮಾನವಾಗಿದೆ ಎಂದರು.

ರಾಷ್ಟ್ರೀಯ ಎಸ್ಸಿಎಸ್ಟಿ ಆಯೊಗ ಅಸ್ತಿತ್ವದಲ್ಲಿರುವಾಗ ರಾಜ್ಯ ಸರ್ಕಾರ ಪ್ರತ್ಯೇಕ ಎಸ್ಸಿ ಆಯೋಗ ರಚನೆ ಮಾಡುವುದಾಗಿ ಹೇಳುತ್ತಿದೆ. ಅಲ್ಲಿಯವರಗೆ ಅನೇಕ ಸಮಯೂದಾಯಗಳಿಗೆ ಅನ್ಯಾಯವಾಗುತ್ತದೆ. ಸರ್ಕಾರ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗದೇ ಜಾರಿಗೊಳಿಸಿದರೆ ನ್ಯಾಯಾಲಯದಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ನರಸಿಂಹಲು ಪೋತಗಲ್, ಪವಿತ್ರ, ಹುಸೇನಪ್ಪ ಪಲಕನಮರಡಿ, ಭೀಮೇಶ ವಕೀಲ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News