×
Ad

ರಾಯಚೂರು | ವಿವಿಧ ಗ್ರಾಮ ಪಂಚಾಯತ್ ಗಳಿಗೆ ತಾಲೂಕು ಪಂಚಾಯತ್ ಇಓ ಭೇಟಿ

Update: 2025-01-18 17:25 IST

ರಾಯಚೂರು : ತಾಲೂಕಿನ ಕಮಲಾಪೂರು, ಉಡಮಗಲ್ ಗ್ರಾಮ ಪಂಚಾಯತ್ ಗಳಿಗೆ ರಾಯಚೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್ ಅವರು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಮಲಾಪೂರು, ಉಡಮಗಲ್, ಮರ್ಚಟ್ಹಾಳ್ ಮತ್ತು ಮಮದಾಪೂರು ಗ್ರಾಮಗಳಲ್ಲಿನ ಕೂಸಿನ ಮನೆ, ಶಿಶುಪಾಲನಾ ಕೇಂದ್ರಕ್ಕೆ ಭೇಟಿ ನೀಡಿ ಆಯಾ ಕೇಂದ್ರಗಳಿಗೆ ಒದಗಿಸಲಾಗಿರುವ ಸೌಲಭ್ಯಗಳ ಬಗ್ಗೆ ಪರಿಶೀಲಿಸಿದರು.

ಶಿಶುಪಾಲನಾ ಕೇಂದ್ರದಲ್ಲಿರುವ ಮಕ್ಕಳ ಯೋಗಕ್ಷೇಮದ ಬಗ್ಗೆ ವಿಚಾರಿಸಿದರು. ಶಿಶು ಆರೈಕೆದಾರರಿಗೆ, ಕೇಂದ್ರವನ್ನು ಸ್ವಚ್ಚವಾಗಿಟ್ಟುಕೊಳ್ಳಲು ಸೂಚಿಸಿದರು. ಮಕ್ಕಳಿಗೆ ಆಹಾರ ಬಡಿಸುವ ಮುಂಚೆ ತಮ್ಮ ಮತ್ತು ಮಕ್ಕಳ ಕೈಗಳನ್ನು ಸ್ವಚ್ಚವಾಗಿ ತೊಳೆಯಬೇಕು ಎಂದರು.

ಶಿಶುಪಾಲನಾ ಕೇಂದ್ರಗಳಿಗೆ ಬೇಕಾಗುವ ಎಲ್ಲಾ ಅಗತ್ಯ ಸೌಕರ್ಯಗಳನ್ನು ಒದಗಿಸಲು ಅಗತ್ಯ ಕ್ರಮವಹಿಸಬೇಕು ಎಂದು ಇದೆ ವೇಳೆ ಇಓ ಅವರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ತಾರಕೇಶ್ವರಿ, ಅನ್ನಪೂರ್ಣ, ರಂಗಪ್ಪ, ಐಇಸಿ ಸಂಯೋಜಕ ಧನರಾಜ, ಮೊಬೈಲ್ ಕ್ರಷ್ ಸಿಬ್ಬಂದಿ ವಿಜಯಲಕ್ಷ್ಮಿ ಹಾಗೂ ಬಿ.ಎಫ್.ಟಿ, ಜಿ.ಕೆ.ಎಮ್ ಮತ್ತು ಗ್ರಾ.ಪಂ ಸಿಬ್ಬಂದಿ ಇದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News