×
Ad

ರಾಯಚೂರು: ರಾಜ ಕಾಲುವೆಯಲ್ಲಿ ಬಿದ್ದ ಆಕಳನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ದಳ‌

Update: 2025-01-18 11:48 IST

ರಾಯಚೂರು: ನಗರದ ಚಂದ್ರಮೌಳೇಶ್ವರ ವೃತ್ತದ ಬಳಿಯ ರಾಜ ಕಾಲುವೆಯಲ್ಲಿ ಆಕಳು ಬಿದ್ದಿದ‌ ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಆಕಳನ್ನು ರಕ್ಷಣೆ ಮಾಡಿ ಪ್ರಥಮ ಚಿಕಿತ್ಸೆ ನೀಡಿದ್ದಾರೆ.

ಲಕ್ಷ್ಮಣ ಗೊಜ್ಜರ್ ಎಂಬವರು ಅಗ್ನಿಶಾಮಕ ಠಾಣೆಗೆ ಕರೆಮಾಡಿದ ಹಿನ್ನೆಲೆಯಲ್ಲಿ ಇಲಾಖೆಯ ಆರ್ ವಿ ವಾಹನದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಯವರು ಘಟನಾ ಸ್ಥಳಕ್ಕೆ ತೆರಳಿ ಸಾರ್ವಜನಿಕರ ಸಹಾಯದೊಂದಿಗೆ ಆಕಳನ್ನು ರಕ್ಷಣೆ ಮಾಡಿದರು.

ನಂತರ ಆಕಳ ಆರೋಗ್ಯ ಸ್ಥಿತಿ ಸರಿ ಇಲ್ಲದ ಕಾರಣ ಪಶು ವೈದ್ಯರನ್ನು ಕರೆಯಿಸಿ ಆಕಳಿಗೆ ಚಿಕಿತ್ಸೆ ಕೊಡಿಸಿದ್ದಾರೆ.

ಅಗ್ನಿ ಶಾಮಕ ಪ್ರಭಾರ ಠಾಣಾಧಿಕಾರಿ ಮಾರುತಿ, ಚಾಲಕ ಶ್ರೀನಿವಾಸ್ ಡಿ.ಕೆ, ಬಸವರಾಜ್ ಟಿ, ನರಸಿಂಹಲು,‌ ಹನುಮಂತಪ್ಪ, ನಾಸಿರ್ ಅಹ್ಮದ್, ದೇವರಾಜ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News