×
Ad

ರಾಯಚೂರು | ಬಿ.ವಿ ನಾಯಕ್‌ಗೆ ಕೈತಪ್ಪಿದ ಟಿಕೆಟ್‌ ; ಡೀಸೆಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಬೆಂಬಲಿಗ

Update: 2024-03-27 15:41 IST

ರಾಯಚೂರು: ರಾಯಚೂರು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಬಿ.ವಿ ನಾಯಕ್‌ಗೆ ‌ಕೈತಪ್ಪಿದ ಹಿನ್ನೆಲೆ ಅವರ  ಅಭಿಮಾನಿಯೊಬ್ಬರು ಡೀಸೆಲ್ ಸುರಿದುಕೊಂಡು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು‌.

ರಾಯಚೂರಿನಲ್ಲಿ ನಡೆದ ಬಿಜೆಪಿ ಬೆಂಬಲಿಗರ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ್ ಗೆ ಬಹಿರಂಗವಾಗಿ ಗೋಬ್ಯಾಕ್ ಘೋಷಣೆ ಕೇಳಿಬಂದವು. ಬಿ.ವಿ.ನಾಯಕ್‌ಗೆ ಟಿಕೇಟ್ ನೀಡುವಂತೆ ಒತ್ತಾಯಿಸಿ ಅವರ ಬೆಂಬಲಿಗರು ರಾಯಚೂರಿನ ರಸ್ತೆಯಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.

ಬಿ.ವಿ‌ನಾಯಕ್‌ ಅವರ ಮುಂದೆಯೇ ಬೆಂಬಲಿಗನೊಬ್ಬ ಡಿಸೇಲ್ ಸುರಿದುಕೊಂಡು ಆಕ್ರೋಶ ವ್ಯಕ್ತಪಡಿಸಿದರು. "ಆಗ ಮುಂದಿನ ಎರಡು ದಿನಗಳು ಕಾದು ನೋಡುವೆ. ಕಾರ್ಯಕರ್ತರ ಅಭಿಮಾನಿಗಳ ತೀರ್ಮಾನದಂತೆ‌ ನಿರ್ಧಾರ ಮಾಡುವೆ" ಎಂದು ಬಿ.ವಿ‌.ನಾಯಕ್ ಹೇಳಿದರು.

ತನ್ನ ತಂದೆ ಹಾಗೂ ತಾನು 40 ವರ್ಷದಿಂದ ಇದ್ದ ಪಕ್ಷ ಬಿಟ್ಟು ಬಿಜೆಪಿಗೆ ಬಂದಿದ್ದೆ. ಈಗ ಬಿಜೆಪಿ‌ ನಾಯಕರು ಮೋಸ ಮಾಡಿದ್ದಾರೆ ಎಂದು ಬಿ.ವಿ ನಾಯಕ್ ಆಕ್ರೋಶ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News