ರಾಯಚೂರಿನಲ್ಲಿ ಟಿಪ್ಪು ಜಯಂತಿ ಆಚರಣೆ
ರಾಯಚೂರು: ರಾಯಚೂರಿನ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಟಿಪ್ಪು ಜಯಂತಿ ಆಚರಣೆ ನಡೆಯಿತು.
ಟಿಪ್ಪು ಸುಲ್ತಾನ್ ಅವರ 276ನೇ ಜಯಂತಿ ಅಂಗವಾಗಿ ಟಿಪ್ಪು ಸುಲ್ತಾನ್ ಅವರ ಭಾವಚಿತ್ರಕ್ಕೆ ಮಹಾನಗರ ಪಾಲಿಕೆ ಉಪ ಮಹಾಪೌರ ಸಾಜೀದ್ ಸಮೀರ್ ಮಾಲಾರ್ಪಣೆ ಮಾಡಿದರು.
ಬಳಿಕ ಕಾಂಗ್ರೆಸ್ ನಗರ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಮುಹಮ್ಮದ್ ಶಾಲಂ ಮಾತನಾಡಿ, ಟಿಪ್ಪು ಸುಲ್ತಾನ್ ಅವರ ವೀರಾವೇಶ, ದೇಶ ಪ್ರೇಮ ಪ್ರತಿಯೊಬ್ಬರಿಗೂ ಮಾದರಿಯಾಗಿದೆ. ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು. ಎಲ್ಲಾ ಸಮುದಾಯದವರು, ಸಂಘ ಸಂಸ್ಥೆಗಳು ಸೇರಿಕೊಂಡು ಟಿಪ್ಪು ಸುಲ್ತಾನ್ ಅವರ ಜಯಂತಿಯನ್ನು ಆಚರಣೆ ಮಾಡುತ್ತಿರುವುದು ಸಂತಸದ ವಿಚಾರವಾಗಿದೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಅಬ್ದುಲ್ ಹೈಫಿರೋಝ್, ಸೈಯದ್ ಹುಸೇನ್, ನಗರಸಭೆ ಮಾಜಿ ಸದಸ್ಯ ಶೇಖ್ ಮಾಸೂಂ, ದಸ್ತಗಿರಿ, ಖಾಜಾ ಅಸ್ಲಂ, ಬಿ.ರಮೇಶ, ಯೂಸೂಫ್ ಖಾನ್, ಕೊಂಡಪ್ಪ, ಹಮರಾಜ್, ಎಂ.ಆರ್.ಬೇರಿ, ಖರೀಮ್, ವಿಶ್ವನಾಥ ಪಟ್ಟಿ, ಕರ್ನಾಟಕ ದಲಿತ ಸಂಘಟನೆ ಒಕ್ಕೂಟ ರಾಜ್ಯಾಧ್ಯಕ್ಷ ಎಲ್.ಸುರೇಶ್, ಎಸ್.ನರಸಿಂಹಲು, ಫಕ್ರುದ್ದೀನ್ ಅಲಿ, ಅಹ್ಮದ್ ಶೇಖ್, ಜಲಾಲ್, ಎಂ.ಡಿ.ಮಾಸೂಂ, ಅನ್ವರ್ ಬಾಷ ಜಂಬಣ್ಣ, ಮಂಜು, ನಾಗೇಂದ್ರ, ರಾಜು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.