×
Ad

ರಾಯಚೂರು | ತರಬೇತಿ ಬದುಕಿಗೆ ದಾರಿ ದೀಪ : ಕುಲಸಚಿವ ಡಾ.ಗುರುರಾಜ

Update: 2025-02-18 18:20 IST

ರಾಯಚೂರು : ಉದ್ಯಮಶೀಲತಾಭಿವೃದ್ಧಿ ತರಬೇತಿಯಲ್ಲಿ ಭಾಗವಹಿಸಿದ ನಂತರ ಸಣ್ಣ ಸಣ್ಣ ಉದ್ಯಮಗಳನ್ನು ಪ್ರಾರಂಭಿಸಿ ಅವುಗಳನ್ನು ಸರಿಯಾಗಿ ನಡೆಸಿ ಮುಂದೆ ದೊಡ್ಡ-ದೊಡ್ಡ ಉದ್ಯಮಗಳನ್ನಾಗಿ ಪರಿರ್ವತನೆ ಮಾಡಲು ಉದ್ಯಮಶೀಲರು ಪ್ರಯತ್ನ ಮಾಡಬೇಕು ಎಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ಗುರುರಾಜ ಸುಂಕದ ಭಾವಿ ಕಿವಿ ಮಾತು ಹೇಳಿದರು.

ಫೆ.15ರ ಶನಿವಾರ ದಂದು ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸಾವಯವ ಕೃಷಿ ಸಂಶೋಧನಾ ಸಂಸ್ಥೆಯ ಸಮ್ಮೇಳನ ಸಭಾಂಗಣದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ರಾಷ್ಟ್ರೀಯ ಜೀವನೋಪಾಯ ಅಭಿಯಾನದ ಸ್ವ-ಸಹಾಯ ಸಂಘದ ಸದಸ್ಯರುಗಳಿಗೆ ಸಂಕಲ್ಪ ಯೋಜನೆ ಅಡಿ 5 ದಿನಗಳ ಹಾಗೂ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ ಸಿಡಾಕ್, ರಾಯಚೂರು ಇವರ ಸಂಯುಕ್ತಾಶ್ರಯದಲ್ಲಿ ಐದು ದಿನಗಳ ಉದ್ಯಮಶೀಲತಾಭಿವೃದ್ಧಿ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು.

ಸಿಡಾಕ್ ಜಂಟಿ ನಿರ್ದೇಶಕರು ಹಾಗೂ ಕೌಶಲ್ಯಾಭಿವೃದ್ಧಿ ಅಧಿಕಾರಿಗಳಾದ ಜಿ.ಯು.ಹ್ಮಡೇದ್ ಅವರು ಮಾತನಾಡಿ, ಈ ತರಬೇತಿಯಿಂದ ತಾವೆಲ್ಲರೂ ಯಾವುದಾದರು ಒಂದು ಉದ್ಯಮದಲ್ಲಿ ತೊಡಗಿಸಿಕೊಂಡು ಕುಟುಂಬದ ಬಲವರ್ಧನೆಗೆ ಅನುಕೂಲವಾಗುವದರ ಜೊತೆಗೆ ಸ್ವಯಂ ಉದ್ಯೋಗಕ್ಕೆ ಇರುವ ಸರ್ಕಾರದ ಯೋಜನೆಗಳು, ಬ್ಯಾಂಕ್ ವ್ಯವಹಾರ ಮಾಡುವ ಬಗ್ಗೆ, ಹಣಕಾಸು ಹಾಗೂ ಹಣಕಾಸೇತರ ಸೌಲಭ್ಯಗಳ ಬಗ್ಗೆ, ಲೆಕ್ಕ ಪತ್ರ ನಿರ್ವಹಣೆ, ಯೋಜನಾ ವರದಿ ತಯಾರಿಕೆ, ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸುವಲ್ಲಿ ಸಹಾಯ ನೀಡುವುದು, ಈ ಮೂಲಕ ಮಹಿಳೆಯರು ಆರ್ಥಿಕವಾಗಿ ಸಬಲೀಕರಣಗೊಳ್ಳಬೇಕು ಎಂದು ಹೇಳಿದರು.

ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಜಿಲ್ಲಾ ಅಧಿಕಾರಿ ರಾಯಣ್ಣ ಕೆ. ಅವರು ಮಾತನಾಡಿ, ಈ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ, ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆಯಿಂದ ಪಿ.ಎಮ್.ಇ.ಜಿ.ಪಿ ಸ್ಕಿಮ್ನಿಂದ, ಸರಕಾರದ ಸಹಾಯ ಧನ ನೀಡಲಾಗುತ್ತದೆ ಎಂದು ತಿಳಿಸಿದರು.

ಸಾ.ಕೃ.ವಿ.ವಿ ಮುಖ್ಯಸ್ಥರಾದ ಡಾ.ಬಸವಣ್ಣಪ್ಪ ಅವರು ಮಾತನಾಡಿ, ಸರಿಯಾದ ಗುರಿಯನ್ನು ಇಟ್ಟುಕೊಂಡು ಆ ಗುರಿಯನ್ನು ಮುಟ್ಟಲು ಸತತ ಪ್ರಯತ್ನ, ದಕ್ಷತೆ, ಪ್ರಾಮಾಣಿಕತೆ, ಧನಾತ್ಮಕ ಆಲೋಚನೆಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಡೇ-ನಲ್ಮ್ ಅಭಿಯಾನ ವ್ಯವಸ್ಥಾಪಕರಾದ ಸುರೇಶ, ರಸೂಲ್ ಸಾಬ್, ಶಾಂತಾ ಮನೋಹರ, ಸಿಡಾಕ್ ತರಬೇತಿ ಅಧಿಕಾರಿ ನಾಗರಾಜ ಕೆ, ಶಿಬಿರಾರ್ಥಿ ಗೀತಾ, ಸಿದ್ದಲಿಂಗಮ್ಮ ಪ್ರಾರ್ಥಿಸಿದರು. ಸಭೆಯಲ್ಲಿ ತರಬೇತಿ ಪಡೆದ 55 ಅಭ್ಯರ್ಥಿಗಳು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News