×
Ad

ರಾಯಚೂರು | ಆಸ್ತಿ ತೆರಿಗೆಯ ಬಗ್ಗೆ ಜಾಗೃತಿ ಮೂಡಿಸಲು ಒತ್ತಾಯ

Update: 2025-02-17 17:00 IST

ರಾಯಚೂರು : ಇಲ್ಲಿನ ಹರಿಜನವಾಡ ಬಡಾವಣೆಯ ಜನರು ಅನೇಕ ವರ್ಷಗಳಿಂದ ಅಸ್ತಿ ತೆರಿಗೆ ಪಾವತಿ ಮಾಡದೇ ವಾಸವಾಗಿದ್ದು, ಪರಿಶಿಷ್ಟ ಜಾತಿಯವರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿರುವ ಜನರು. ಕರ ಪಾವತಿ, ಕಾನೂನಿನ ಜ್ಞಾನವಿಲ್ಲ, ಮಹಾನಗರ ಪಾಲಿಕೆಯಿಂದ ಕಾನೂನಿನ ಅರಿವು ಮೂಡಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ, ದಲಿತ ಮುಖಂಡ ಬಾಬುರಾವ್ ಮನವಿ ಮಾಡಿದರು.

ಅವರಿಂದು ಪತ್ರಿಕಾಗೋಷ್ಠಿಯಲ್ಲಿ ವಾರ್ಡ ನಂಬರ್ 19, 20, 21ರ ಮನೆ ಮಾಲಕರ ಹೆಸರು, ಮನೆ ಸಂಖ್ಯೆ ದಾಖಲಿಸಿಲ್ಲ. ಹರಿಜನವಾಡ ಬಡಾವಣೆಯಲ್ಲಿ ಮನೆಮಾಲಕರ ಹೆಸರು ಹಾಗೂ ಮನೆ ಸಂಖ್ಯೆ ಅಧಿಕಾರಿಗಳು ಸರಿಯಾಗಿ ದಾಖಲಿಸಿಲ್ಲ. ಸುಮಾರು 35 ವರ್ಷಗಳಿಂದ ಬಹುತೇಕ ಬಡವರು ವಾಸಮಾಡುತ್ತಿದ್ದು. ಅವರಿಗೆ ಯಾವುದೇ ಸೌಲಭ್ಯಗಳು ಇಲ್ಲದೆ ವಂಚಿತರಾಗಿದ್ದಾರೆ ಎಂದು ಆರೋಪಿಸಿದರು.

ಮನೆಗಳ ಹೆಸರು ಮಾತ್ರ ಡಿಮ್ಯಾಂಡ್ ಡ್ರಾಫ್ಟ್ಗಳಲ್ಲಿ ಇದೆ. ಉಳಿದ ಬಡಕುಟುಂಬಗಳ ಹೆಸರು, ಮನೆ ಸಂಖ್ಯೆ ಹುಡುಕಿದರೂ ಸಿಗುತ್ತಿಲ್ಲ. ಮಹಾನಗರ ಪಾಲಿಕೆ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಲೇಬೇಕು ಎಂದು ಮನವಿ ಮಾಡಿದರು.

ಮನೆ ತೆರಿಗೆ ಪಾವತಿ ಹೇಗೆ ಮಾಡಬೇಕು ಎಂಬುದರ ಕುರಿತು ಸೂಕ್ತ ಮಾರ್ಗದರ್ಶನ ನೀಡಬೇಕು. ಮನೆಯ ತೆರಿಗೆ ಕಟ್ಟಲಿಕ್ಕೆ ಅಲ್ಲಿನ ಜನ ಮುಂದೆ ಬಂದಿದ್ದಾರೆ ಎಂದು ತಿಳಿಸಿದರು.

ಜನಪ್ರತಿಧಿನಿಗಳು ಚುನಾವಣೆ ವೇಳೆ ಮತ ಕೇಳಲು ಬರುತ್ತಾರೆ. ಆದರೆ, ಬಡವರ ಮನೆ ತೆರಿಗೆ ಸಮಸ್ಯೆ ಬಗ್ಗೆ ಯಾರೂ ಕೇಳುವುದಿಲ್ಲ. ನೀವು ನಿಮ್ಮಮನೆಯ ತೆರಿಗೆ ಪಾವತಿಸಿದ್ದೀರಾ? ಎಂದು ಯಾರಾದರೂ ಕೇಳಿದರೆ ಅಲ್ಲಿನ ಜನ ಬದಲಾವಣೆ ಅಗಲಿದ್ದಾರೆ ಎಂದರು.

ಮಹಾನಗರ ಪಾಲಿಕೆಯಿಂದ ವಿಶೇಷ ಸರ್ವೆ ಮಾಡಿಸಿ, ಪರಿಶಿಷ್ಟ ಜಾತಿ ಮತ್ತು ಪಂಗಡದ ಆಸ್ತಿಯ ತೆರಿಗೆಯನ್ನು ಪಾವತಿ ಮಾಡಬೇಕು ಎಂದು ಆಗ್ರಹಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News