ರಾಯಚೂರು | ʼವಾರ್ತಾಭಾರತಿʼ ವರದಿ ಫಲಶ್ರುತಿ : ಐದನಾಳರ್ ದೊಡ್ಡಿಯಲ್ಲಿ ಮೂಲಸೌಕರ್ಯದ ಕೊರತೆಗೆ ಸಿಎಂ ಕಚೇರಿಯಿಂದ ಸ್ಪಂದನೆ
ರಾಯಚೂರು : ಲಿಂಗಸುಗೂರು ತಾಲೂಕಿನ ಗುಂತಗೋಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಐದನಾಳರ್ ದೊಡ್ಡಿಯಲ್ಲಿ ಮಳೆ ಬಂದಾಗ ಹಳ್ಳ ತುಂಬಿ ಗ್ರಾಮಸ್ಥರಿಗೆ ಸಮಸ್ಯೆಯಾಗುತ್ತಿತ್ತು ಈ ಬಗ್ಗೆ ವಾರ್ತಾ ಭಾರತಿ ಪತ್ರಿಕೆ ಮಾಡಿದ ವರದಿಗೆ ಮುಖ್ಯಮಂತ್ರಿಯ ಸಚಿವಾಲಯದ ವಿಶೇಷ ಕರ್ತವ್ಯ ಅಧಿಕಾರಿ ಸ್ಪಂದಿಸಿದ್ದಾರೆ.
‘ಮೂಲಭೂತ ಸೌಕರ್ಯ ವಂಚಿತ ಐದನಾಳರ್ ದೊಡ್ಡಿ ಗ್ರಾಮ’ ಶೀರ್ಷಿಕೆಯ ಅಡಿಯಲ್ಲಿ ವಾರ್ತಾ ಭಾರತಿಯಲ್ಲಿ ದಿನ ಪತ್ರಿಕೆಯಲ್ಲಿ ಸೆ.20ರಂದು ವರದಿ ಪ್ರಕಟಿಸಲಾಗಿತ್ತು. ಇದಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರಕಾರದ ಕಾರ್ಯದರ್ಶಿ, ರಾಯಚೂರು ಜಿಲ್ಲಾ ಪಂಚಾಯತ್ ಸಿಇಒಗೆ ಸಮಸ್ಯೆಯ ಪರಿಹಾರಕ್ಕೆ ಸೂಚಿಸಿದ್ದರು. ತಾಲೂಕು ಪಂಚಾಯತ್‌ನ ಸೂಚನೆ ಮೇರೆಗೆ ಗುಂತಗೋಳ ಗ್ರಾಮ ಪಂಚಾಯತ್‌ನ ಪಿಡಿಒ ಐದನಾಳರ್ ಗ್ರಾಮಕ್ಕೆ ಭೇಟಿ ನೀಡಿ ಹಳ್ಳದಿಂದ ಆಗುವ ಸಮಸ್ಯೆಯ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದಿದ್ದು, ನರೇಗಾ ಯೋಜನೆಯಡಿ ಸಿಡಿ ನಿರ್ಮಾಣ ಮಾಡಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.