ರಿಮ್ಸ್ ನಿರ್ದೇಶಕ ಡಾ.ರಮೇಶ್ ಬಿ ಅವರಿಂದ ಕಲ್ಯಾಣ ಕರ್ನಾಟಕ ಭಾಗಕ್ಕೆ ಅನ್ಯಾಯ: ಡಾ.ರಝಾಕ್ ಉಸ್ತಾದ್
ರಾಯಚೂರು: ಇಲ್ಲಿನ ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ರಿಮ್ಸ್) ಯಲ್ಲಿ ಲಭ್ಯವಿರುವ ವಿವಿಧ ವೃಂದದ ಹುದ್ದೆಗಳಿಗೆ ನಿಯೋಜನೆ ಮೇರೆಗೆ ಸೇವೆ ಸಲ್ಲಿಸಲು ಅವಕಾಶ ನೀಡುವಲ್ಲಿ ಸಂಸ್ಥೆಯ ಡೀನ್ ಡಾ.ರಮೇಶ್ ಬಿ.ಎಚ್. ರವರು ಕಲ್ಯಾಣ ಕರ್ನಾಟಕ ಪ್ರದೇಶದ ಉದ್ಯೋಗಿಗಳಿಗೆ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ರಾಜ್ಯ ಉಪಾಧ್ಯಕ್ಷ ಡಾ.ರಝಾಕ್ ಉಸ್ತಾದ್ ಅವರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದರು.
ಆಡಳಿತಾತ್ಮಕ ಹುದ್ದೆಗಳಿಗೆ ನಿಯೋಜಿಸುವಾಗ ಕಲ್ಯಾಣ ಕರ್ನಾಟಕದ ಹೊರಗಿನ (ನಾನ್ ಹೆಚ್ ಕೆ) ಉದ್ಯೋಗಿಗಳಿಗೆ ಅವಕಾಶ ನೀಡುವ ಮೂಲಕ ಕಲ್ಯಾಣ ಕರ್ನಾಟಕ ಭಾಗದ ಉದ್ಯೋಗಿಗಳಿಗೆ ಅವಕಾಶವಂಚಿತರಾಗಿಸುತ್ತಿದ್ದಾರೆ. ರಿಮ್ಸ್ ಸಂಸ್ಥೆಯ ನಿರ್ದೇಶಕ ಡಾ.ರಮೇಶ್ ಬಿ.ಎಚ್. ಅವರು ಕಲ್ಯಾಣ ಕರ್ನಾಟಕ ಪ್ರದೇಶದವರಲ್ಲ. ಹಾಗಾಗಿ ಈ ಭಾಗದವರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ದೂರಿದರು.
ಕಳೆದ ವರ್ಷ ರಿಮ್ಸ್ ಸಂಸ್ಥೆಯಡಿಯಲ್ಲಿ ನಡೆಸಲಾಗುತ್ತಿರುವ ಬಿ.ಎಸ್ಸಿ. ನರ್ಸಿಂಗ್ ಕಾಲೇಜಿಗೆ ಪ್ರಾಚಾರ್ಯರನ್ನು 371ಜೆ ನಿಯಮದಂತೆ ಕಲ್ಯಾಣ ಕರ್ನಾಟಕ ಪ್ರದೇಶದವರಿಗೆ ವಹಿಸುವಂತೆ ಕೋರಲಾಗಿತ್ತು, ಅದರಂತೆ ತಾವು ಡೀನ್ ಡಾ.ರಮೇಶ್ ಬಿ.ಎಚ್. ರವರಿಗೆ ಸೂಚಿಸಿದಾಗಲೂ ಇಲ್ಲಿಯವರೆಗೆ ಕ್ರಮವಹಿಸಿರುವದಿಲ್ಲ. ವಿದ್ಯಾರ್ಹತೆಯಲ್ಲಿ ಕಡಿಮೆ ಅರ್ಹತೆ, ಕಡಿಮೆ ಅನುಭವ ಹೊಂದಿರುವ, ಇತ್ತೀಚಿಗೆ ಎಂ.ಎಸ್ಸಿ. ನರ್ಸಿಂಗ್ ಪೂರೈಸಿದ ಉದ್ಯೋಗಿಗೆ ನರ್ಸಿಂಗ್ ಕಾಲೇಜು ಪ್ರಾಚಾರ್ಯರ ಹುದ್ದೆಯಲ್ಲಿ ಕಾರ್ಯನಿರ್ವಹಿಸಲು ಅವಕಾಶ ನೀಡಿರುವುದು 371ಜೆ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ.
ಬಿಎಸ್ಸಿ ನರ್ಸಿಂಗ್ ಕಾಲೇಜಿಗೆ ಕ್ಲಿನಿಕಲ್ ನರ್ಸಿಂಗ್ ವಿಭಾಗದಿಂದ ನಿಯೋಜನೆ ಮಾಡುವಾಗ 371ಜೆ ನಿಯಮಗಳನ್ವಯ ಮೆರಿಟ್ ಆಧಾರದಲ್ಲಿ ಹಾಗೂ ಶೇ 75 ರಷ್ಟು ಕಲ್ಯಾಣ ಕರ್ನಾಟಕದವರಿಗೆ ಮಾಡಬೇಕು ಹಾಗೂ ಅರ್ಹತೆ, ಅನುಭವ, ಜೇಷ್ಠತೆಯ ಆಧಾರದಲ್ಲಿ ನಿಯೋಜನೆ ಮಾಡಬೇಕು. ಬಿ.ಎಸ್ಸಿ. ನರ್ಸಿಂಗ್ ಕಾಲೇಜಿಗೆ ಕಡ್ಡಾಯವಾಗಿ ಕಲ್ಯಾಣ ಕರ್ನಾಟಕ ಪ್ರದೇಶದವರಿಗೆ ಪ್ರಾಚಾರ್ಯರನ್ನಾಗಿ ನೇಮಿಸಬೇಕು. ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ರಿಮ್ಸ್)ಯು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಇರುವುದರಿಂದ ಕಡ್ಡಾಯವಾಗಿ ಕಲ್ಯಾಣ ಕರ್ನಾಟಕ ಪ್ರದೇಶದವರನ್ನೇ ಸಂಸ್ಥೆಯ ಡೀನ್( ನಿರ್ದೇಶಕರು) ಹುದ್ದೆಗೆ ನೇಮಿಸಬೇಕು. ಸಂಸ್ಥೆಯಲ್ಲಿ ಲಭ್ಯವಿರುವ ಆಡಳಿತಾತ್ಮಕ ಹುದ್ದೆಗಳಿಗೆ ನಿಯೋಜನೆ ಮಾಡುವಾಗ 371ಜೆ ನಿಯಮದಂತೆ ಮೀಸಲಾತಿ ನಿಗದಿಗೊಳಿಸಿ ನಿಯೋಜನೆ ಮಾಡಬೇಕು ಎಂದು ಆಗ್ರಹಿಸಿದರು.
ವದು. ಬಿ.ಎಸ್ಸಿ. ನರ್ಸಿಂಗ್ ಕಾಲೇಜಿಗೆ ಕಡ್ಡಾಯವಾಗಿ ಕಲ್ಯಾಣ ಕರ್ನಾಟಕ ಪ್ರದೇಶದವರಿಗೆ ಪ್ರಾಚಾರ್ಯರನ್ನಾಗಿ ನೇಮಿಸಬೇಕು. ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ರಿಮ್ಸ್)ಯು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಇರುವದರಿಂದ ಕಡ್ಡಾಯವಾಗಿ ಕಲ್ಯಾಣ ಕರ್ನಾಟಕ ಪ್ರದೇಶದವರನ್ನೇ ಸಂಸ್ಥೆಯ ಡೀನ್( ನಿರ್ದೇಶಕರು) ಹುದ್ದೆಗೆ ನೇಮಿಸಬೇಕು. ಸಂಸ್ಥೆಯಲ್ಲಿ ಲಭ್ಯವಿರುವ ಆಡಳಿತಾತ್ಮಕ ಹುದ್ದೆಗಳಿಗೆ ನಿಯೋಜನೆ ಮಾಡುವಾಗ 371ಜೆ ನಿಯಮದಂತೆ ಮೀಸಲಾತಿ ನಿಗದಿಗೊಳಿಸಿ ನಿಯೋಜನೆ ಮಾಡಬೇಕು ಎಂದು ಆಗ್ರಹಿಸಿದರು.