ಸಿರವಾರ | ಕುಡಿಯುವ ನೀರಿನ ಕೆರೆ ನಿರ್ಮಾಣಕ್ಕೆ ಕರವೇ ಒತ್ತಾಯ
ಸಿರವಾರ : ಪಟ್ಟಣದಲ್ಲಿ ಕುಡಿಯುವ ನೀರಿನ ಕೆರೆ ನಿರ್ಮಾಣ ಮಾಡುವಂತೆ ಸಣ್ಣ ನೀರವಾರಿ ಹಾಗೂ ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜುಗೆ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಸಿರವಾರ ತಾಲೂಕು ಘಟಕದಿಂದ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.
ಸುಮಾರು 20 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಸಿರವಾರ ಪಟ್ಟಣದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಆರಂಭವಾಗಿದ್ದು, ಬೇಸಿಗೆಯಲ್ಲಿ ಬೋರವೇಲ್ ಗಳೆಲ್ಲಾ ಭತ್ತಿ ಹೋಗುತ್ತಿವೆ. ಜನರು ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮುಖ್ಯವಾಗಿ ಜಾನುವಾರುಗಳು ಹಾಗೂ ಪ್ರಾಣಿ ಪಕ್ಷಿಗಳು ಬಹಳಷ್ಟು ತೊಂದರೆ ಅನುಭವಿಸುತ್ತಿವೆ ಹಾಗಾಗಿ ತಾವುಗಳು ಸಿರವಾರ ಪಟ್ಟಣಕ್ಕೆ ಕೆರೆ ನಿರ್ಮಿಸಿ ಜನರಿಗೆ ಅನುಕೂಲ ಮಾಡಿ ಕೊಡಬೇಕೆಂದರು.
ಪಟ್ಟಣದ ಯುವಕರು ಹಾಗೂ ಸಾರ್ವಜನಿಕರಿಗೆ ಕ್ರೀಡಾಂಗಣದ ಅವಶ್ಯಕತೆ ಇದ್ದು, ಕ್ರೀಡಾಂಗಣ ಇಲ್ಲದೆ ಬೆಳಿಗ್ಗೆ ವಾಯು ವಿಹಾರಕ್ಕೆ ತೆರಳಿದ ಸಂದರ್ಭದಲ್ಲಿ ಅವಘಡ ಸಂಭವಿಸಿವೆ. ಅದ್ದರಿಂದ ಸಿರವಾರ ಪಟ್ಟಣಕ್ಕೆ ಕ್ರೀಡಾಂಗಣ ನಿರ್ಮಿಸಿ ಯುವಕರಿಗೆ, ಸಾರ್ವಜನಿಕರಿಗೆ ಕಲ್ಪಿಸಿಕೊಡಬೇಕೆಂದು ವಿನಂತಿ ಮಾಡಿದರು.
ಈ ಸಂದರ್ಭದಲ್ಲಿ ಕರವೇ ತಾಲೂಕಧ್ಯಕ್ಷ ಕೆ.ರಾಘವೇಂದ್ರ ಖಾಜನಗೌಡ, ವೆಂಕಟೇಶ ಶಂಕ್ರಿ, ದೇವರಾಜಗೌಡ, ಯಲ್ಲಪ್ಪ ದೊರೆ, ಭೀಮರಾಯ ಅಂಬಿಗರ, ರಮೇಶ ದೊರೆ, ಅಂಜಿನಯ್ಯ ಪೂಜಾರಿ, ನಾಗೇಶ ನಾಯಕ ಸೇರಿದಂತೆ ಇನ್ನೂ ಮುಂತಾದವರಿದ್ದರು.