ಸಿರವಾರ | ಕುರುಕುಂದ ಪ್ರೌಢಶಾಲೆಯಲ್ಲಿ ರಂಗೋತ್ಸವ ಕಾರ್ಯಕ್ರಮ
Update: 2025-02-24 19:18 IST
ಸಿರವಾರ : ವಿದ್ಯಾರ್ಥಿಗಳಲ್ಲಿ ಹಾಗೂ ಶಿಕ್ಷಕರಲ್ಲಿ ಚಟುವಟಿಕೆಗಳ ಮೂಲಕ ಅನುಭವದ ಕಲಿಕೆ ಮತ್ತು ಸಂತೋಷದಾಯಕ ಕಲಿಕೆಯನ್ನು ಉಂಟು ಮಾಡಲು ಸಹಕಾರಿಯಾಗಲಿದೆ ಎಂದು ನಾಗಲಿಂಗಪ್ಪ ತಿಳಿಸಿದರು.
ತಾಲೂಕಿನ ಕುರಕುಂದ ಪ್ರೌಢಶಾಲೆಯಲ್ಲಿ 2024- 25 ನೇ ಸಾಲಿನ ವಾರ್ಷಿಕ ಯೋಜನಾ ಮಂಡಳಿ ರಂಗೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದ ವಿಭಿನ್ನ ಕಲೆ ಸಂಸ್ಕೃತಿ ವಿವಿಧ ಚಟುವಟಿಕೆಗಳ ಮೂಲಕ ಶಾಲಾ ಪರಿಸರವನ್ನು ರೋಮಾಂಚಕ ಮತ್ತು ಸಂತೋಷದಾಯಕ ಕಲಿಕೆಯ ಸ್ಥಳವಾಗಿ ಪರಿವರ್ತಿಸಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಶೇಖರಪ್ಪ ಗೌಡ ಮಾಲಿಪಾಟೀಲ್, ಮುಖ್ಯೋಪಾಧ್ಯಾಯರು ನಾಗಲಿಂಗಪ್ಪ, ಸದಸ್ಯರಾದ ಗಂಗಾಧರ್ ಬಡಿಗೇರ್, ಸಹ ಶಿಕ್ಷಕರಾದ ರತ್ನಾಕರ್, ಬಶರತ ಮೇಡಂ, ಶ್ರೀದೇವಿ ಸಜ್ಜನ್, ಅತಿಥಿ ಶಿಕ್ಷಕರಾದ ಉಮಾರ್, ಬಸವರಾಜ, ಶಾಲಾ ಮಕ್ಕಳು ಇದ್ದರು.