×
Ad

ರಾಯಚೂರು | ವಿವಿಧ ಕ್ಷೇತ್ರಗಳ ಸಾಧಕರಿಗೆ ‘ಮುಂಗಾರು ಸಿರಿ ಸಂಪದ’ ಪ್ರಶಸ್ತಿ ಪ್ರದಾನ

Update: 2025-06-08 17:21 IST

ರಾಯಚೂರು : ಕೃಷಿ ಪ್ರಧಾನವಾದ ಮುನ್ನೂರು ಕಾಪು ಸಮಾಜದಿಂದ ಎಲ್ಲರನ್ನು ವರ್ಗದ ಸಾಧಕರನ್ನು ಗುರುತಿಸುವ ಕಾರ್ಯ ಶ್ಲಾಘನೀಯ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಹೇಳಿದ್ದಾರೆ.

ನಗರದ ವೀರಾಂಜನೇಯ ಕಲ್ಯಾಣ ಮಂಟಪದಲ್ಲಿ ಮುಂಗಾರು ಸಾಂಸ್ಕೃತಿಕ ರಾಯಚೂರು ಬೆಳ್ಳಿ ಹಬ್ಬದ ಅಂಗವಾಗಿ ಮುನ್ನೂರು ಕಾಪು ಸಮಾಜ ವಿವಿಧ ಸಮಾಜದ ಮುಖಂಡರಿಗೆ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಏರ್ಪಡಿಸಲಾಗಿದ್ದ ‘ಮುಂಗಾರು ಸಿರಿ ಸಂಪದ ಪ್ರಶಸ್ತಿ’ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದ ಒಟ್ಟು 29 ಜಾತಿ, ಸಂಘಟನೆಗಳ ಮುಖ್ಯಸ್ಥರಿಗೆ ಸನ್ಮಾನ ಹಾಗೂ ಇವರೊಂದಿಗೆ ವಿವಿಧ ಕ್ಷೇತ್ರಗಳಾದ ಸಾಹಿತ್ಯ, ಕೃಷಿ, ಸಂಗೀತ, ಚಿತ್ರಕಲಾ ಮತ್ತು ಸಂಕೀರ್ಣ ಕ್ಷೇತ್ರಗಳ ಸಾಧಕರು ಸೇರಿ ಒಟ್ಟು 56 ಜನರ ಸನ್ಮಾನ ಸಮಾರಂಭ ರಾಯಚೂರು ಇತಿಹಾಸದಲ್ಲಿ ಮಾತ್ರವಲ್ಲ ರಾಜ್ಯದ ಇತಿಹಾಸದಲ್ಲಿಯೇ ಒಂದು ದಾಖಲೆ ಕಾರ್ಯಕ್ರಮ ಎಂದರು.

ಕಾರ್ಯಕ್ರಮದಲ್ಲಿ ರೈತರು, ಸಂಘಟನಾಕಾರರು ಸಹಿತ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಒಟ್ಟು 56 ಸಾಧಕರಿಗೆ ಮುಂಗಾರು ಸಿರಿ ಸಂಪದ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು. ಶಾಸಕ ಶಿವರಾಜ ಪಾಟೀಲ್, ಬಿಚ್ಚಾಲಿ ಮಹಾಸ್ವಾಮಿಗಳು, ವೀರತಪಸ್ವಿ ಮಹಾಸ್ವಾಮಿ, ಮಾಜಿ ಶಾಸಕ ಎ.ಪಾಪಾರೆಡ್ಡಿ, ಬೆಳ್ಳಂ ನರಸರೆಡ್ಡಿ, ಉಟುಕೂರು ಕೃಷ್ಣಮೂರ್ತಿ, ಹಿರಿಯ ಮುಖಂಡರು ಸಹಿತ ಹಲವರು ಪಾಲ್ಗೊಂಡಿದ್ದರು.

ಎ.ಪಾಪಾರೆಡ್ಡಿ ಅವರ ನೇತೃತ್ವದಲ್ಲಿ ಮುನ್ನೂರು ಕಾಪು ಸಮಾಜದ ಒಗ್ಗಟ್ಟು ಪ್ರದರ್ಶನ ಹಾಗೂ ಮುಂಗಾರು ಸಾಂಸ್ಕೃತಿಕ ಹಬ್ಬವನ್ನು ಅದ್ದೂರಿಯಾಗಿ ಆಯೋಜಿಸಲಾಗಿದ್ದು, ಈ ಮೂಲಕ ರಾಜ್ಯದಲ್ಲೇ ಗುರುತಿಸಿಕೊಂಡಿದೆ.

-ಎನ್.ಎಸ್.ಬೋಸರಾಜು, ಸಚಿವ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News