ರಾಯಚೂರು: ಮನೆಗೆ ನುಗ್ಗಿ ನಗ-ನಗದು ಕಳವು
Update: 2025-02-06 22:43 IST
ರಾಯಚೂರು: ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಒಳಗಡೆ ಹಿಂಬಾಗಿಲಿನಿಂದ ಒಳಗೆ ನುಗ್ಗಿದ ಕಳ್ಳರ ಗುಂಪು ಚಿನ್ನಾಭರಣ, ಹಣ ಕದ್ದು ಪರಾರಿಯಾಗಿದ ಘಟನೆ ನಡೆದಿದೆ.
ನಗರದ ವೆಂಕಟೇಶ್ವರ ಕಾಲೋನಿಯ ವೆಂಕಟೇಶ್ವರ ಅವರ ಮನೆಯಲ್ಲಿ ಕಳವಾಗಿದೆ. ಕಳೆದ ಫೆ.1 ರಂದು ಕುಟುಂಬಸ್ಥರೊಂದಿಗೆ ಬೆಂಗಳೂರಿಗೆ ಹೋಗಿದ್ದಾಗ ಮನೆಗೆ ನುಗ್ಗಿದ 5 ಜನ ಕಳ್ಳರು 2.5 ಕೆಜಿ ಬೆಳ್ಳಿ, 50 ಸಾವಿರ ನಗದು, ಸೇರಿದಂತೆ ಒಟ್ಟು ನಾಲ್ಕು ಲಕ್ಷ ಮೌಲ್ಯದ ಚಿನ್ನಾಭರಣ, ಕಂಚು ಕದ್ದು ಪರಾರಿಯಾಗಿದ್ದಾರೆ ಎಂದು ಮನೆಯ ಮಾಲಕರು ತಿಳಿಸಿದ್ದಾರೆ.
ಫೆ.5 ರಂದು ಊರಿನಿಂದ ವಾಪಸ್ಸಾದ ವಿಷಯ ತಿಳಿದಿದ್ದು, ಘಟನೆಯು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಪಶ್ಚಿಮ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.