ವೆಲ್ ಫೇರ್ ಪಾರ್ಟಿ ಮೌಲ್ಯಾಧಾರಿತ ರಾಜಕಾರಣ ಮಾಡುತ್ತಿದೆ: ತಾಹೇರ್ ಹುಸೇನ್
ರಾಯಚೂರು: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದು ರಾಷ್ಟ್ರೀಯ ಪಕ್ಷವಾಗಿದ್ದು, ಚುನಾವಣೆಯಲ್ಲಿ ಸ್ಪರ್ಧಿಸಲು ಮೌಲ್ಯಾಧಾರಿತ ವಿಚಾರಗಳ ಮೂಲಕ ಶ್ರಮಿಸುತ್ತಿದೆ ಎಂದು ವೆಲ್‌ಫೇರ್ ಪಾರ್ಟಿಯ ರಾಜ್ಯಾಧ್ಯಕ್ಷ ತಾಹೇರ್ ಹುಸೇನ್ ತಿಳಿಸಿದರು.
ಮಾನ್ವಿಯಲ್ಲಿ ಜಿಲ್ಲಾ ಘಟಕದ ಪದಾಧಿಕಾರಿಗಳ ನೇಮಕ ಕಾರ್ಯಕ್ರಮದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವೆಲ್‌ಫೇರ್ ಪಾರ್ಟಿ ಕೇವಲ ರಾಜಕಾರಣಕ್ಕೆ ಸೀಮಿತವಾಗದೇ ಮೌಲ್ಯಾಧಾರಿತ ವಿಚಾರಗಳ,ನೈತಿಕ ನಿಯಮದ ಮೇಲೆ ನಡೆಯುತ್ತಿದೆ. ಇದರ ಮೊದಲ ರಾಷ್ಟ್ರೀಯ ಅಧ್ಯಕ್ಷರು ಮುಜ್ತಬಾ ಫಾರೂಕ್, ಸೈಯದ್ ಖಾಸಿಮ್ ರಸೂಲ್ ಇಲ್ಯಾಸ್, ಇಲ್ಯಾಸ್ ಅಜ್ಮಿ, ಜಫರುಲ್ ಇಸ್ಲಾಂ ಖಾನ್, ಮೌಲಾನಾ ಅಬ್ದುಲ್ ವಹಾಬ್ ಖಿಲ್ಜಿ ಮತ್ತು ಬಿ.ಟಿ ಲಲಿತಾ ನಾಯಕ್ ಪ್ರಮುಖ ನಾಯಕರೊಟ್ಟಿಗೆ ದೇಶದಾದ್ಯಂತ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಇದೇ ವೇಳೆ ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ನೇಮಕ ಮಾಡಿದ್ದು, ಜಿಲ್ಲಾಧ್ಯಕ್ಷರಾಗಿ ಮೌಲಾನಾ ಶೇಕ್ ಫರೀದ್ ಉಮ್ರಿ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಘನಿ, ಉಪಧ್ಯಕ್ಷರಾಗಿ ಮೆಹಬೂಬ್ ಖಾನ್, ಗುಲಾಮ್ ಮುಹಮ್ಮದ್, ಫಾರೂಕ್ ಮನಿಯಾರ್, ಸಂಘಟನಾ ಕಾರ್ಯದರ್ಶಿಯಾಗಿ ಎಂ.ಎ ಎಚ್. ಮುಕೀಮ್, ಕಾರ್ಯದರ್ಶಿಯಾಗಿ ನಾಸೀರ್ ಅಲಿ ಅವರನ್ನು ನೇಮಕ ಮಾಡಲಾಯಿತು.