×
Ad

Shivamogga : ಪೌರಕಾರ್ಮಿಕರಿಗೆ ವಿಮಾನಯಾನ ಭಾಗ್ಯ

Update: 2026-03-02 01:18 IST

ಶಿವಮೊಗ್ಗ : ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪನವರು ತಮ್ಮ ಜನ್ಮದಿನವನ್ನು ಅತ್ಯಂತ ವಿಭಿನ್ನವಾಗಿ ಆಚರಿಸುವ ಮೂಲಕ ಗಮನ ಸೆಳೆದಿದ್ದಾರೆ. ಸೊರಬ ತಾಲೂಕಿನ ಪುರಸಭೆ ಹಾಗೂ ಆನವಟ್ಟಿ ಪಟ್ಟಣ ಪಂಚಾಯತ್‌ವ್ಯಾಪ್ತಿಯ ಪೌರಕಾರ್ಮಿಕರಿಗೆ ವಿಮಾನಯಾನ ಮಾಡಿಸುವ ಮೂಲಕ ಹೊಸ ಮಾದರಿಯನ್ನು ತೋರಿದ್ದಾರೆ.

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನಡೆದ ಈ ವಿಶೇಷ ಕ್ಷಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾಕ್ಷಿಯಾದರು. ಸಚಿವ ಮಧು ಬಂಗಾರಪ್ಪನವರಿಗೆ ಜನ್ಮದಿನದ ಶುಭಾಶಯ ಕೋರಿದ ಸಿಎಂ, ಬಳಿಕ ವಿಮಾನ ಪ್ರಯಾಣಕ್ಕೆ ಸಜ್ಜಾಗಿದ್ದ ಪೌರಕಾರ್ಮಿಕರೊಂದಿಗೆ ಮಾತನಾಡಿದರು. ʼಶ್ರಮಿಕ ವರ್ಗದವರನ್ನು ಈ ರೀತಿಯಾಗಿ ಸನ್ಮಾನಿಸಿ ಮತ್ತು ಅವರಿಗೆ ವಿಮಾನಯಾನದಂತಹ ಅಪರೂಪದ ಅವಕಾಶ ಕಲ್ಪಿಸುವುದು ಶ್ಲಾಘನೀಯ ಕೆಲಸʼ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಮ್ಮ ಸೇವೆಯನ್ನು ಗುರುತಿಸಿ ಇಂತಹದೊಂದು ದೊಡ್ಡ ಅವಕಾಶ ನೀಡಿದ ಸಚಿವರಿಗೆ ನಾವು ಋಣಿ ಎಂದು ಕಾರ್ಮಿಕರು ಭಾವುಕರಾಗಿ ಮಾತನಾಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News