×
Ad

2ನೇ ಟೆಸ್ಟ್: ಪಾಕಿಸ್ತಾನ 274 ರನ್‌ಗೆ ಆಲೌಟ್

Update: 2024-08-31 22:26 IST

PC ; NDTV 

ರಾವಲ್ಪಿಂಡಿ : ಆಲ್‌ರೌಂಡರ್ ಮೆಹಿದಿ ಹಸನ್ ಮಿರಾಝ್(5-61) ಹಾಗೂ ವೇಗಿ ತಸ್ಕಿನ್ ಅಹ್ಮದ್(3-57) ದಾಳಿಗೆ ತತ್ತರಿಸಿದ ಪಾಕಿಸ್ತಾನ ಕ್ರಿಕೆಟ್ ತಂಡ ಬಾಂಗ್ಲಾದೇಶ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ 85 ಓವರ್‌ಗಳಲ್ಲಿ 274 ರನ್‌ಗೆ ಆಲೌಟಾಗಿದೆ.

ಮೊದಲ ದಿನವಾದ ಶುಕ್ರವಾರ ಬಾಂಗ್ಲಾದೇಶ ಟಾಸ್ ಜಯಿಸಿ ಫೀಲ್ಡಿಂಗ್ ಆಯ್ದುಕೊಂಡಿತು. ಆದರೆ ಮಳೆಯಿಂದಾಗಿ ಮೊದಲ ದಿನದ ಪಂದ್ಯ ನಡೆಯಲಿಲ್ಲ. 2ನೇ ದಿನವಾದ ಶನಿವಾರ ಬ್ಯಾಟಿಂಗ್ ಮಾಡಿದ ಪಾಕಿಸ್ತಾನದ ಪರ ಸಯಿಮ್ ಅಯ್ಯೂಬ್(58 ರನ್), ಶಾನ್ ಮಸೂದ್(57 ರನ್), ಸಲ್ಮಾನ್ ಅಲಿ(54 ರನ್)ಅರ್ಧಶತಕ ಗಳಿಸಿದರು. ಬಾಬರ್ ಆಝಮ್(31 ರನ್), ಮುಹಮ್ಮದ್ ರಿಝ್ವಾನ್(29 ರನ್)ಎರಡಂಕೆಯ ಸ್ಕೋರ್ ಗಳಿಸಿದರು.

ಪಾಕಿಸ್ತಾನ ಲಂಚ್ ವಿರಾಮದಲ್ಲಿ 1 ವಿಕೆಟ್‌ಗೆ 99 ರನ್ ಗಳಿಸಿತು. ನಾಯಕ ಮಸೂದ್ ತನ್ನ 10ನೇ ಅರ್ಧಶತಕ ಪೂರೈಸಿದರು. ಆದರೆ 57 ರನ್ ಗಳಿಸಿ ಮಿರಾಝ್‌ಗೆ ವಿಕೆಟ್ ಒಪ್ಪಿಸಿದರು. ಈ ಮೂಲಕ 2ನೇ ವಿಕೆಟ್‌ಗೆ 107 ರನ್ ಜೊತೆಯಾಟ ಮುರಿದು ಬಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News