×
Ad

ರೋಹಿತ್‌ ಶರ್ಮಾ ಔಟಾಗಿದ್ದಕ್ಕೆ ಸಂಭ್ರಮಿಸಿದ CSK ಅಭಿಮಾನಿಯ ಹತ್ಯೆ!

Update: 2024-03-31 23:14 IST

Photo: X 

ಮುಂಬೈ: ಐಪಿಎಲ್ ಪಂದ್ಯ ವೀಕ್ಷಿಸುವಾಗ ಅಭಿಮಾನಿಗಳ ನಡುವೆ ಮಾರಾಮಾರಿ ಉಂಟಾಗಿ ಓರ್ವ ವ್ಯಕ್ತಿಯನ್ನು ಥಳಿಸಿ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ಕೊಲ್ಲಾಪುರದ ಹನ್ಮಂತವಾಡಿ ಪ್ರದೇಶದಲ್ಲಿ ವರದಿಯಾಗಿದೆ.

ಬುಧವಾರ ಮಾ.27 ರಂದು ಹೈದರಾಬಾದ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯಾಟದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.

ಬಂಡುಪಂತ್ ತಿಬಿಲೆ, ಬಲವಂತ್ ಝಂಜಗೆ ಮತ್ತು ಸಾಗರ್ ಝಂಜಗೆ ಅವರು ಹೈದರಾಬಾದ್ ಹಾಗೂ ಮುಂಬೈ ನಡುವಿನ ಪಂದ್ಯವನ್ನು ವೀಕ್ಷಿಸುತ್ತಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಬಂಡುಪಂತ್ ಬೆಂಬಲಿಸುತ್ತಿದ್ದರು. ಬಲವಂತ್ ಝಂಜಗೆ ಮತ್ತು ಸಾಗರ್ ಝಂಜಗೆ ಅವರು ಮುಂಬೈ ಇಂಡಿಯನ್ಸ್‌ ಪರವಾಗಿದ್ದರು ಎನ್ನಲಾಗಿದೆ.

ಪಂದ್ಯ ನಡೆಯುತ್ತಿದ್ದಂತೆ ಮುಂಬೈ ಬ್ಯಾಟರ್ ರೋಹಿತ್ ಶರ್ಮಾ ಔಟಾಗಿದರು. ಈ ವೇಳೆ ಚೆನ್ನೈ ತಂಡದ ಅಭಿಮಾನಿ ಬಂಡುಪಂತ್ ಸಂಭ್ರಮಿಸಿದರು. ಇದನ್ನು ನೋಡಿದ ಬಲವಂತ್ ಹಾಗೂ ಸಾಗರ್ ಆಕ್ರೋಶಗೊಂಡು ಬಂಡುಪಂತ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳದು ಬಂದಿದೆ.

ಎರಡು ಗುಂಪುಗಳ ನಡುವೆ ಜಗಳ ಶುರುವಾದ ಪರಿಣಾಮ ಬಂಡುಪಂತ್ ಮೇಲೆ ಸಾಗರ್ ಹಾಗೂ ಬಲವಂತ್ ಹಲಗೆ ಮತ್ತು ಕೋಲಿನಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಬಂಡುಪಂತ್ ಗೆ ಮಾರಣಾಂತಿಕ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಬಂಡುಪಂತ್ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆಗಾಗಿ ನ್ಯಾಯಾಲಯವು ಆರೋಪಿಗಳ ಬಂಧನಕ್ಕೆ ಆದೇಶಿಸಿದೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News