×
Ad

ಎಸಿಸಿ ಎಮರ್ಜಿಂಗ್ ಕಪ್: ಫೈನಲ್‌ನಲ್ಲಿ ಪಾಕಿಸ್ತಾನ ಎ ವಿರುದ್ಧ ಸೋಲುಂಡ ಭಾರತ ಎ

Update: 2023-07-23 21:39 IST

Photo: twitter \ @TheRealPCB_Live

ಕೊಲಂಬೊ: ಎಸಿಸಿ ಪುರುಷರ ಎಮರ್ಜಿಂಗ್ ಕಪ್‌ನ ಫೈನಲ್ ಪಂದ್ಯದಲ್ಲಿ ಭಾರತ ಎ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎ ತಂಡದ ವಿರುದ್ಧ 128 ರನ್ ಅಂತರದಿಂದ ಸೋಲುಂಡಿದೆ.

ರವಿವಾರ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕ್ ತಂಡ ತಯ್ಯಬ್ ತಾಹಿರ್(108 ರನ್, 71 ಎಸೆತ)ಗಳಿಸಿದ ಶತಕದ ನೆರವಿನಿಂದ 8 ವಿಕೆಟ್ ನಷ್ಟಕ್ಕೆ 352 ರನ್ ಗಳಿಸಿತು.

ಗೆಲ್ಲಲು 353 ರನ್ ಕಠಿಣ ಗುರಿ ಪಡೆದ ಭಾರತ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ(61 ರನ್)ಅರ್ಧಶತಕದ ಕೊಡುಗೆಯ ಹೊರತಾಗಿಯೂ 40 ಓವರ್‌ಗಳಲ್ಲಿ 224 ರನ್‌ಗೆ ಆಲೌಟಾಯಿತು. ಸುಫಿಯಾನ್ ಮುಖೀಮ್(3-66) ನೇತೃತ್ವದ ಬೌಲಿಂಗ್ ದಾಳಿಗೆ ಭಾರತವು ತತ್ತರಗೊಂಡಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News