Asian Para Games | ಪುರುಷರ ಲಾಂಗ್ ಜಂಪ್: ಧರ್ಮರಾಜ್ ಗೆ ಚಿನ್ನ
ಧರ್ಮರಾಜ್ |Photo Credit : ndtv
ನಗೋಯ, ಅ. 22: ಪ್ಯಾರಾ ಏಶ್ಯನ್ ಗೇಮ್ಸ್‌ನಲ್ಲಿ ಪುರುಷರ ಲಾಂಗ್‌ಜಂಪ್ ಟಿ44/ಟಿ62/ಟಿ64 ಸ್ಪರ್ಧೆಯಲ್ಲಿ ಸೊಲೈರಾಜ್ ಧರ್ಮರಾಜ್ ಚಿನ್ನದ ಪದಕ ಜಯಿಸಿದರು.
ಧರ್ಮರಾಜ್ 7.15 ಮೀಟರ್ ದೂರಕ್ಕೆ ಜಿಗಿದು ಏಶ್ಯನ್ ದಾಖಲೆ ನಿರ್ಮಿಸಿ 807 ಅಂಕ ಗಳಿಸಿದರು. ಇದರೊಂದಿಗೆ ಅಗ್ರ ಸ್ಥಾನ ಪಡೆದರು. ಮಲೇಷ್ಯಾದ ಎಡ್ಡಿ ಬೆರ್ನಾರ್ಡ್ ಟಿ44 ವಿಭಾಗದಲ್ಲಿ ಗೇಮ್ಸ್ ದಾಖಲೆ (6.34 ಮೀಟರ್)ಯೊಂದಿಗೆ 740 ಅಂಕ ಗಳಿಸಿ ಬೆಳ್ಳಿ ಪದಕ ಜಯಿಸಿದರು.
ಜಪಾನಿನ ಯುಮಾ ಟಮಕಿ ಟಿ64 ವಿಭಾಗದಲ್ಲಿ ವೈಯಕ್ತಿಕ ಶ್ರೇಷ್ಠ ಸಾಧನೆ (6.89 ಮೀಟರ್)ಯೊಂದಿಗೆ ಕಂಚಿನ ಪದಕ ಜಯಿಸಿದರು.