×
Ad

ಏಶ್ಯನ್ ಟಿಟಿ ಚಾಂಪಿಯನ್ಶಿಪ್ | ಮಹಿಳೆಯರ ಡಬಲ್ಸ್ ನಲ್ಲಿ ಐತಿಹಾಸಿಕ ಕಂಚು ಸಹಿತ ಭಾರತಕ್ಕೆ ಮೂರು ಪದಕ

Update: 2024-10-13 22:47 IST

Photo : olympics

ಅಸ್ತಾನ(ಕಝಕ್ಸ್ತಾನ) : ಐಹಿಕಾ ಮುಖರ್ಜಿ ಹಾಗೂ ಸುತೀರ್ಥ ಮುಖರ್ಜಿ ಅವರ ಕನಸಿನ ಓಟ ಸೆಮಿ ಫೈನಲ್ನಲ್ಲಿ ಕೊನೆಗೊಂಡಿದ್ದು, ಮಹಿಳೆಯರ ಡಬಲ್ಸ್ ನಲ್ಲಿ ಐತಿಹಾಸಿಕ ಕಂಚು ಸಹಿತ ಮೂರು ಪದಕಗಳೊಂದಿಗೆ ಏಶ್ಯನ್ ಟೇಬಲ್ ಟೆನಿಸ್ ಚಾಂಪಿಯನ್ಶಿಪ್ನಲ್ಲಿ ಭಾರತವು ತನ್ನ ಅಭಿಯಾನ ಅಂತ್ಯಗೊಳಿಸಿದೆ.

ರವಿವಾರ 30 ನಿಮಿಷದೊಳಗೆ ಕೊನೆಗೊಂಡಿರುವ ಅಂತಿಮ-4ರ ಹಣಾಹಣಿಯಲ್ಲಿ ವಿಶ್ವದ ನಂ.15ನೇ ಜೋಡಿ ಐಹಿಕಾ ಹಾಗೂ ಸುತೀರ್ಥ ಅವರು ಜಪಾನ್‌ನ ಮಿವಾ ಹರಿಮೊಟೊ ಹಾಗೂ ಮಿಯು ಕಿಹಾರಾ ವಿರುದ್ಧ 4-11, 9-11, 8-11 ಅಂತರದಿಂದ ಸೋತಿದ್ದಾರೆ.

ಭಾರತದ ಜೋಡಿ ಕ್ವಾರ್ಟರ್ ಫೈನಲ್ನಲ್ಲಿ ದಕ್ಷಿಣ ಕೊರಿಯಾದ ಕಿಮ್ ನಯೊಂಗ್ ಹಾಗೂ ಲೀ ಯುನೈ ಅವರನ್ನು ಮಣಿಸಿ ಏಶ್ಯನ್ ಚಾಂಪಿಯನ್ಶಿಪ್ನಲ್ಲಿ ಭಾರತಕ್ಕೆ ಮಹಿಳೆಯರ ಡಬಲ್ಸ್ನಲ್ಲಿ ಮೊತ್ತ ಮೊದಲ ಪದಕವನ್ನು ದೃಢಪಡಿಸಿದರು.

ಇದಕ್ಕೂ ಮೊದಲು ಮಣಿಕಾ ಬಾತ್ರಾ, ಐಹಿಕಾ ಮುಖರ್ಜಿ ಹಾಗೂ ಸುತೀರ್ಥ ಮುಖರ್ಜಿ ಅವರನ್ನೊಳಗೊಂಡ ಭಾರತೀಯ ಮಹಿಳೆಯರ ತಂಡ ಟೀಮ್ ಸ್ಪರ್ಧೆಯಲ್ಲಿ ಐತಿಹಾಸಿಕ ಕಂಚು ಜಯಿಸಿತ್ತು.

ಪುರುಷರ ವಿಭಾಗದಲ್ಲಿ ಅಚಂತ ಶರತ್ ಕಮಲ್, ಮಾನವ್ ಠಕ್ಕರ್ ಹಾಗೂ ಹರ್ಮೀತ್ ದೇಸಾಯಿ ಪಂದ್ಯಾವಳಿಯಲ್ಲಿ ಸತತ ಮೂರನೇ ಬಾರಿ ಕಂಚಿನ ಪದಕ ಜಯಿಸಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News