ಆಸ್ಟ್ರೇಲಿಯನ್ ಓಪನ್: ಫೈನಲ್ ನಲ್ಲಿ ಎಡವಿದ ಎಚ್.ಎಸ್. ಪ್ರಣಯ್
Update: 2023-08-06 21:59 IST
ಎಚ್.ಎಸ್. ಪ್ರಣಯ್.| Photo: PTI
ಹೊಸದಿಲ್ಲಿ: ಭಾರತದ ಎಚ್.ಎಸ್.ಪ್ರಣಯ್ ಆಸ್ಟ್ರೇಲಿಯನ್ ಓಪನ್ ಸೂಪರ್-500 ಬ್ಯಾಡ್ಮಿಂಟನ್ ಟೂರ್ನಮೆಂಟ್ ನ ಫೈನಲ್ ನಲ್ಲಿ ಚೀನಾದ ವೆಂಗ್ ಹಾಂಗ್ ಯಾಂಗ್ ವಿರುದ್ಧ ಮೂರು ಗೇಮ್ ಗಳ ಅಂತರದಿಂದ ಸೋಲನುಭವಿಸಿ ರನ್ನರ್ಸ್ ಅಪ್ ಗೆ ತೃಪ್ತಿಪಟ್ಟುಕೊಂಡರು.
ರವಿವಾರ ನಡೆದ ಪುರುಷರ ಸಿಂಗಲ್ಸ್ ಫೈನಲ್ ನಲ್ಲಿ ಕೇರಳದ 31ರ ಹರೆಯದ ಪ್ರಣಯ್ ವಿಶ್ವದ ನಂ.24ನೇ ರ್ಯಾಂಕಿನ ಆಟಗಾರ ವೆಂಗ್ ವಿರುದ್ಧ 9-21, 23-21, 20-22 ಗೇಮ್ ಗಳ ಅಂತರದಿಂದ ಸೋತಿದ್ದಾರೆ.
ಈ ಮೊದಲು ಈ ಇಬ್ಬರು ಒಮ್ಮೆ ಮಾತ್ರ ಮುಖಾಮುಖಿಯಾಗಿದ್ದರು. ಮೇನಲ್ಲಿ ಮಲೇಶ್ಯ ಮಾಸ್ಟರ್ಸ್ ನಲ್ಲಿ ಪ್ರಣಯ್ ಅವರು ವೆಂಗ್ರನ್ನು ಮೂರು ಗೇಮ್ಗಳ ಅಂತರದಿಂದ ಮಣಿಸಿದ್ದರು.