×
Ad

ಪ್ಯಾರಿಸ್ ಒಲಿಂಪಿಕ್ಸ್ | ಸ್ಟೀಪಲ್ ಚೇಸ್ ನಲ್ಲಿ ಫೈನಲ್ ತಲುಪುವ ಮೂಲಕ ಇತಿಹಾಸ ನಿರ್ಮಿಸಿದ ಅವಿನಾಶ್ ಸಬ್ಲೆ

Update: 2024-08-06 12:17 IST

Photo: PTI

ಪ್ಯಾರಿಸ್: 3000 ಮೀಟರ್ ಸ್ಟೀಪಲ್ ಚೇಸ್ ಓಟದಲ್ಲಿ ಐದನೆಯವರಾಗುವ ಮೂಲಕ, ಸೋಮವಾರ ಸ್ಟೇಡ್ ಡಿ ಫ್ರಾನ್ಸ್ ಕ್ರೀಡಾಂಗಣದಲ್ಲಿ ಅವಿನಾಶ್ ಮುಕುಂದ್ ಸಬ್ಲೆ ಇತಿಹಾಸ ನಿರ್ಮಿಸಿದರು. ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಸ್ಟೀಪಲ್ ಚೇಸ್ ಓಟದಲ್ಲಿ ಫೈನಲ್ ತಲುಪಿದ ಪ್ರಪ್ರಥಮ ಭಾರತೀಯ ಓಟಗಾರ ಎಂಬ ಹಿರಿಮೆಗೆ ಅವರು ಭಾಜನರಾದರು.

ಎರಡನೆ ಹೀಟ್ ನಲ್ಲಿ ತಮ್ಮ ಓಟ ಪ್ರಾರಂಭಿಸಿದ ಸಬ್ಲೆ 8 ನಿಮಿಷ 15.43 ಸೆಕೆಂಡ್ ನಲ್ಲಿ ಐದನೆಯವರಾಗಿ ತಮ್ಮ ಓಟ ಮುಗಿಸುವ ಮೂಲಕ ಫೈನಲ್ ಗೆ ಅರ್ಹತೆ ಗಿಟ್ಟಿಸಿದರು. ಪ್ರತಿ ಹೀಟ್ ನಲ್ಲಿ ಮೊದಲಿಗರಾಗುವ ಐವರು ಓಟಗಾರರು ಫೈನಲ್ ಗೆ ಪ್ರವೇಶ ಪಡೆಯುತ್ತಾರೆ.

ಸಬ್ಲೆ ಓಡಿದ ಹೀಟ್ ನಲ್ಲಿ ಮೊರೊಕ್ಕೊದ ಮುಹಮ್ಮದ್ ಟಿಂಡೌಫ್ 8 ನಿಮಿಷ 10.62 ಸೆಕೆಂಡ್ ಗಳಲ್ಲಿ ಗುರಿಯನ್ನು ತಲುಪುವ ಮೂಲಕ ಮೊದಲಿಗರಾದರು. 8 ನಿಮಿಷ 11.61 ಸೆಕೆಂಡ್ ನಲ್ಲಿ ತಮ್ಮ ಓಟ ಪೂರೈಸಿದ ಇಥಿಯೋಪಿಯಾದ ಸ್ಯಾಮ್ಯುಯೆಲ್ ಫಿರೆವು ಎರಡನೆಯವರಾದರು. ಕೀನ್ಯಾದ ಅಬ್ರಹಾಂ ಕಿಬಿವೋತ್, ಜಪಾನ್ ನ ರ್ಯೂಜಿ ಮಿಯುರಾ ಹಾಗೂ ಭಾರತದ ಅವಿನಾಶ್ ಮುಕುಂದ್ ಸಬ್ಲೆ ಕ್ರಮವಾಗಿ ಮೂರು, ನಾಲ್ಕು ಮತ್ತು ಐದನೆಯವರಾದರು. ಆ ಮೂಲಕ ಫೈನಲ್ ಗೆ ಅರ್ಹತೆ ಪಡೆದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News