ಕ್ರಿಕೆಟ್ ದಂತಕತೆ ಬ್ರಾಡ್ಮನ್ ಧರಿಸಿದ್ದ ಬ್ಯಾಗಿ ಗ್ರೀನ್ ಕ್ಯಾಪ್ 4.2 ಕೋಟಿ ರೂ.ಗೆ ಹರಾಜು
Update: 2026-01-27 13:46 IST
Photo credit: nma.gov.au
ಗೋಲ್ಡ್‌ಕೋಸ್ಟ್: 1947-48ರಲ್ಲಿ ಭಾರತದಲ್ಲಿ ನಡೆದಿದ್ದ ಟೆಸ್ಟ್ ಸರಣಿಯ ವೇಳೆ ಆಸ್ಟ್ರೇಲಿಯಾದ ಬ್ಯಾಟಿಂಗ್ ದಂತಕತೆ ಡಾನ್ ಬ್ರಾಡ್ಮನ್ ಧರಿಸಿದ್ದ ಬ್ಯಾಗಿ ಗ್ರೀನ್ ಕ್ಯಾಪ್, ಆನ್‌ಲೈನ್ ಹರಾಜು ತಾಣವಾದ ಲಾಯ್ಡ್ ಬಿಡ್ಡಿಂಗ್‌ನಲ್ಲಿ 4.21 ಕೋಟಿ ರೂ.ಗೆ ಹರಾಜಾಗಿದೆ.
1947-48ರಲ್ಲಿ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ಬ್ರಾಡ್ಮನ್ ಅವರು ಈ ಕ್ಯಾಪನ್ನು ಭಾರತದ ಆಟಗಾರ ಶ್ರೀರಂಗ ವಾಸುದೇವ್ ಸೊಹೋನಿಗೆ ಉಡುಗೊರೆ ನೀಡಿದ್ದರು. ಈ ಕ್ಯಾಪನ್ನು ಸೊಹೋನಿ ಕುಟುಂಬದ ಸದಸ್ಯರು ತಮ್ಮೊಂದಿಗೆ 75 ವರ್ಷಗಳ ಕಾಲ ಕಾಪಾಡಿಕೊಂಡಿದ್ದರು. ಅದನ್ನೀಗ ಹರಾಜು ಮಾಡಲಾಗಿದೆ. ಆದರೆ, ಆ ಕ್ಯಾಪನ್ನು ಯಾರು ಖರೀದಿಸಿದ್ದಾರೆ ಎನ್ನುವುದನ್ನು ಎಲ್ಲಿಯೂ ಉಲ್ಲೇಖಿಸಿಲ್ಲ.