×
Ad

ಮಾದಕದ್ರವ್ಯ ಸೇವನೆ ಆರೋಪದಿಂದ ಬ್ಯಾಡ್ಮಿಂಟನ್ ಆಟಗಾರ ಕೃಷ್ಣಪ್ರಸಾದ್ ಮುಕ್ತ

Update: 2026-01-27 21:59 IST

ಕೃಷ್ಣಪ್ರಸಾದ್ | Photo Credit : X \ Gkrishna_p

ಹೊಸದಿಲ್ಲಿ, ಜ. 27: ಭಾರತೀಯ ಪುರುಷರ ಡಬಲ್ಸ್ ಬ್ಯಾಡ್ಮಿಂಟನ್ ಆಟಗಾರ ಕೃಷ್ಣ ಪ್ರಸಾದ್ ಗರಗರ ನಾಲ್ಕು ವರ್ಷಗಳ ನಿಷೇಧವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಾಷ್ಟ್ರೀಯ ಮಾದಕ ದ್ರವ್ಯ ನಿಗ್ರಹ ಸಂಸ್ಥೆಯ(ನಾಡಾ) ಮೇಲ್ಮನವಿ ಮಂಡಳಿಯು ತೆರವುಗೊಳಿಸಿದೆ.

ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ 25 ವರ್ಷದ ಆಟಗಾರ, 2022ರಲ್ಲಿ ಥಾಮಸ್ ಕಪ್‌ನಲ್ಲಿ ಚಿನ್ನ ಗೆದ್ದಿದ್ದ ಭಾರತ ತಂಡದ ಸದಸ್ಯನಾಗಿದ್ದರು.

ಅವರ ವಿರುದ್ಧದ ನಾಲ್ಕು ವರ್ಷಗಳ ನಿಷೇಧ 2024 ನವೆಂಬರ್ 6ರಂದು ಜಾರಿಗೆ ಬಂದಿತ್ತು. ಆದರೆ, ಜನವರಿ 18ರಿಂದ ಜಾರಿಗೆ ಬರುವಂತೆ ಅವರ ನಿಷೇಧವನ್ನು ತೆರವುಗೊಳಿಸಲು ನಾಡಾದ ಮೇಲ್ಮನವಿ ಮಂಡಳಿಯು ನಿರ್ಧರಿಸಿದೆ. ಹಾಗಾಗಿ, ಈಗ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಅವರು ಸ್ವತಂತ್ರರಾಗಿದ್ದಾರೆ.

ಗರಗ 2019ರ ದಕ್ಷಿಣ ಏಶ್ಯ ಗೇಮ್ಸ್‌ನಲ್ಲಿ ಪುರುಷರ ಡಬಲ್ಸ್ ಚಾಂಪಿಯನ್ ಆಗಿದ್ದರು.

ನಾಡಾವು ಕಡ್ಡಾಯ ಮುನ್ನೆಚ್ಚರಿಕಾ ವಿಧಿವಿಧಾನಗಳನ್ನು ಪಾಲಿಸಲು ವಿಫಲವಾಗಿದೆ ಎಂಬುದಾಗಿ ಗರಗ ಅವರ ವಕೀಲರು ವಾದಿಸಿದರು. ಜಾಗತಿಕ ದ್ರವ್ಯ ನಿಗ್ರಹ ಸಂಸ್ಥೆಯ(ವಾಡಾ) ನಿಯಮಗಳ ಪ್ರಕಾರ, ಪುರುಷ ಅತ್ಲೀಟ್ ಒಬ್ಬರಲ್ಲಿ ಎಚ್‌ಸಿಜಿ ದ್ರವ್ಯ ಇರುವ ಬಗ್ಗೆ ಪ್ರತಿಕೂಲ ವರದಿ ಬಂದರೆ ಅವರನ್ನು ತಕ್ಷಣ ಸಮಗ್ರ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ. ಅವರಲ್ಲಿ ಇರಬಹುದಾದ ಯಾವುದಾದರೂ ಕಾಯಿಲೆಯು ಇದಕ್ಕೆ ಕಾರಣವಲ್ಲ ಎಂಬುದನ್ನು ಖಾತರಿಪಡಿಸಲು ಇದು ಅಗತ್ಯವಾಗಿದೆ ಎಂಬುದಾಗಿ ವಕೀಲರು ಬೆಟ್ಟು ಮಾಡಿದರು.

‘‘ಎಚ್‌ಸಿಜಿಯನ್ನು ಹೊರಗಿನಿಂದ ನೀಡಿರುವ ಸಾಧ್ಯತೆ ಇಲ್ಲ. ಯಾಕೆಂದರೆ ಹೊರಗಿನಿಂದ ನೀಡಲಾದ ಎಚ್‌ಸಿಜಿಯು ಕೆಲವೇ ದಿನಗಳಲ್ಲಿ ದೇಹದಿಂದ ಹೊರಹೋಗುತ್ತದೆ’’ ಎಂದು ಅವರು ವಾದಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News