×
Ad

400 ಅಂತರ್‌ರಾಷ್ಟ್ರೀಯ ಪಂದ್ಯಗಳನ್ನಾಡಿದ ಇಂಗ್ಲೆಂಡ್‌ನ ಎರಡನೇ ಆಟಗಾರ ಬಟ್ಲರ್

Update: 2026-01-27 21:04 IST

ಜೋಸ್ ಬಟ್ಲರ್ | Photo Credit : PTI 

ಕೊಲಂಬೊ, ಜ.27: ಇಂಗ್ಲೆಂಡ್ ಕ್ರಿಕೆಟ್ ತಂಡದ ಬ್ಯಾಟಿಂಗ್ ದಿಗ್ಗಜ ಜೋಸ್ ಬಟ್ಲರ್ ತನ್ನ ದೇಶದ ಪರ 400 ಅಂತರ್‌ರಾಷ್ಟ್ರೀಯ ಪಂದ್ಯಗಳನ್ನಾಡಿದ ಎರಡನೇ ಆಟಗಾರನೆಂಬ ಕೀರ್ತಿಗೆ ಭಾಜನರಾದರು.

ಪ್ರೇಮದಾಸ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಶ್ರೀಲಂಕಾ ತಂಡದ ವಿರುದ್ಧದ ಮೂರನೇ ಏಕದಿನ ಪಂದ್ಯದ ವೇಳೆ ಬಟ್ಲರ್ ಈ ಮೈಲಿಗಲ್ಲು ತಲುಪಿದರು.

ಇಂಗ್ಲೆಂಡ್ ಪರ ಗರಿಷ್ಠ ಅಂತರ್‌ರಾಷ್ಟ್ರೀಯ ಪಂದ್ಯಗಳನ್ನಾಡಿರುವ ಆಟಗಾರರ ಪಟ್ಟಿಯಲ್ಲಿ ವೇಗದ ಬೌಲಿಂಗ್ ದಂತಕತೆ ಜೇಮ್ಸ್ ಆ್ಯಂಡರ್ಸನ್ ಮೊದಲ ಸ್ಥಾನದಲ್ಲಿದ್ದಾರೆ. ಆನಂತರ 35ರ ಹರೆಯದ ಬಟ್ಲರ್ ಅವರಿದ್ದಾರೆ.

ಆ್ಯಂಡರ್ಸನ್ ಎಲ್ಲ ಮಾದರಿಯ ಕ್ರಿಕೆಟ್ ಪಂದ್ಯಗಳಲ್ಲಿ 401 ಪಂದ್ಯಗಳನ್ನಾಡಿದ್ದು, ಒಟ್ಟು 991 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ವಿಕೆಟ್‌ಕೀಪರ್-ಬ್ಯಾಟರ್ ಬಟ್ಲರ್ 14 ಶತಕಗಳ ಸಹಿತ 12,291 ಅಂತರ್‌ರಾಷ್ಟ್ರೀಯ ರನ್ ಗಳಿಸಿದ್ದಾರೆ. ತನ್ನ ತಲೆಮಾರಿನ ಇಂಗ್ಲೆಂಡ್‌ನ ಅತ್ಯಂತ ಪ್ರಭಾವಶಾಲಿ ಬಿಳಿ ಚೆಂಡಿನ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ.

ಬಟ್ಲರ್ 57 ಟೆಸ್ಟ್ ಪಂದ್ಯಗಳ 100 ಇನಿಂಗ್ಸ್‌ಗಳಲ್ಲಿ 2,907 ರನ್ ಗಳಿಸಿದ್ದು, ಇದರಲ್ಲಿ ಎರಡು ಶತಕ ಹಾಗೂ 18 ಅರ್ಧಶತಕಗಳಿವೆ. 50 ಓವರ್ ಮಾದರಿಯಲ್ಲಿ ಒಟ್ಟು 198 ಪಂದ್ಯಗಳಲ್ಲಿ 11 ಶತಕ ಹಾಗೂ 29 ಅರ್ಧಶತಕಗಳ ಸಹಿತ 5,515 ರನ್ ಗಳಿಸಿದ್ದಾರೆ.

ಟಿ-20 ಕ್ರಿಕೆಟ್‌ನಲ್ಲಿ ಹೆಚ್ಚು ಮಿಂಚಿರುವ ಬಟ್ಲರ್ 144 ಪಂದ್ಯಗಳಲ್ಲಿ ಒಂದು ಶತಕ ಹಾಗೂ 28 ಅರ್ಧಶತಕಗಳ ಸಹಿತ 3,869 ರನ್ ಗಳಿಸಿದ್ದಾರೆ.

ಎರಡು ಬಾರಿ ಐಸಿಸಿಯ ಬಿಳಿ ಚೆಂಡಿನ ಪ್ರಶಸ್ತಿ ಗೆದ್ದಿರುವ ಬಟ್ಲರ್ ಫೆ.7ರಿಂದ ಆರಂಭವಾಗಲಿರುವ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಆಡಲು ಸಜ್ಜಾಗಿದ್ದಾರೆ. ಬಟ್ಲರ್ ಮತ್ತೊಮ್ಮೆ ಪ್ರಮುಖ ಪಾತ್ರವಹಿಸುವ ನಿರೀಕ್ಷೆ ಇದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News