×
Ad

ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿ ಅವಾಂತರ: ಭಾರತದ ಮಾಜಿ ಕ್ರಿಕೆಟಿಗ ಜೇಕಬ್ ಮಾರ್ಟಿನ್ ಬಂಧನ

Update: 2026-01-27 22:30 IST

 ಜೇಕಬ್ ಮಾರ್ಟಿನ್ | Photo Credit : indianexpress.com

ಅಹ್ಮದಾಬಾದ್, ಜ.27: ಕುಡಿದ ಮತ್ತಿನಲ್ಲಿ ವಡೋದರದಲ್ಲಿ ಪಾರ್ಕಿಂಗ್ ಮಾಡಿದ್ದ ಮೂರು ವಾಹನಗಳಿಗೆ ತನ್ನ ಐಷಾರಾಮಿ ಕಾರನ್ನು ಢಿಕ್ಕಿ ಹೊಡೆಸಿ ಅವಾಂತರ ಮಾಡಿದ ಭಾರತದ ಮಾಜಿ ಬ್ಯಾಟರ್ ಜೇಕಬ್ ಮಾರ್ಟಿನ್ ಅವರನ್ನು ಮಂಗಳವಾರ ಬೆಳಗ್ಗೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾರತ ಕ್ರಿಕೆಟ್ ತಂಡವನ್ನು 10 ಏಕದಿನ ಪಂದ್ಯಗಳಲ್ಲಿ ಪ್ರತಿನಿಧಿಸಿರುವ 53 ವರ್ಷದ ಮಾರ್ಟಿನ್ ಅವರನ್ನು ಘಟನೆಯ ನಂತರ ವಶಕ್ಕೆ ಪಡೆಯಲಾಗಿದೆ.

ಪುನೀತ್ ನಗರದ ಸಮೀಪ ಬೆಳಗ್ಗಿನ ಜಾವ 2:30ರ ಸುಮಾರಿಗೆ ಈ ಘಟನೆ ನಡೆದಿದೆ. ಮದ್ಯದ ಅಮಲಿನಲ್ಲಿದ್ದ ಮಾರ್ಟಿನ್ ಅವರು ಚಲಾಯಿಸುತ್ತಿದ್ದ ಐಷಾರಾಮಿ ಕಾರು ಮನೆಯ ಹೊರಗೆ ನಿಲ್ಲಿಸಿದ್ದ ಮೂರು ಕಾರುಗಳಿಗೆ ಢಿಕ್ಕಿ ಹೊಡೆದಿದೆ. ಇದರಿಂದ ವಾಹನಗಳಿಗೆ ಭಾರೀ ಹಾನಿಯಾಗಿದೆ ಎಂದು ಅಕೊಟಾ ಠಾಣೆಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಹಾನಿಗೊಂಡ ಕಾರುಗಳ ಮಾಲಕರು ದೂರನ್ನು ನೀಡಿದ ಬಳಿಕ BNS ನ ಸಂಬಂಧಿತ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಲಾಗಿದೆ. ತನಿಖೆಯ ಭಾಗವಾಗಿ ಪೊಲೀಸರು ಮಾರ್ಟಿನ್ ಅವರ ಕಾರನ್ನು ವಶಕ್ಕೆ ಪಡೆದಿದ್ದಾರೆ.

ಈ ಹಿಂದೆ ರಣಜಿಯಲ್ಲಿ ಬರೋಡಾ ತಂಡದ ನಾಯಕತ್ವ ವಹಿಸಿದ್ದ ಮಾರ್ಟಿನ್ ಕಾನೂನು ಸಂಕಷ್ಟಗಳಲ್ಲಿ ಸಿಲುಕುತ್ತಾ ಬಂದಿದ್ದಾರೆ. ಮಾನವ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿ 2011ರಲ್ಲಿ ದಿಲ್ಲಿ ಪೊಲೀಸರು ಮಾರ್ಟಿನ್ ಅವರನ್ನು ಬಂಧಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News