×
Ad

ಕ್ಷೌರ ಮಾಡಿದ್ದಕ್ಕೆ ಆಸೀಸ್ ವಿಕೆಟ್ ಕೀಪರ್ ಅಲೆಕ್ಸ್ ಹಣ ಪಾವತಿಸಿಲ್ಲ ಎಂಬ ಹೇಳಿಕೆಗೆ ಕ್ಷಮೆಯಾಚಿಸಿದ ಕುಕ್

Update: 2023-07-09 14:58 IST

ಅಲಸ್ಟೈರ್ ಕುಕ್, Photo: PTI

ಲಂಡನ್: ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಿನ ಮೂರನೇ ಆ್ಯಶಸ್ ಟೆಸ್ಟ್ ನಲ್ಲಿ ಆತಿಥೇಯರ ಮಾಜಿ ನಾಯಕ ಅಲಸ್ಟೈರ್ ಕುಕ್ ವಿಶೇಷ ಕಾರ್ಯಕ್ರಮದ ವೇಳೆ ಆಸೀಸ್ ವಿಕೆಟ್-ಕೀಪರ್ ಬ್ಯಾಟರ್ ಅಲೆಕ್ಸ್ ಕ್ಯಾರಿ ಕುರಿತಂತೆ ವಿಚಿತ್ರ ಹೇಳಿಕೆಯನ್ನು ನೀಡಿದರು. ತನ್ನ ಹೇಳಿಕೆ ತಪ್ಪೆಂದು ಗೊತ್ತಾದ ನಂತರ ಕ್ಷಮೆಯಾಚಿಸಿದರು.

ಅಲೆಕ್ಸ್ ಕ್ಷೌರ ಮಾಡಿದ ನಂತರ ಕ್ಷೌರಿಕನಿಗೆ ಹಣ ಪಾವತಿಸಲಿಲ್ಲ ಎಂದು ಕುಕ್ ಹೇಳಿದ್ದಾರೆ. ಕುಕ್ ಅವರ ಹೇಳಿಕೆಗಳು ವೈರಲ್ ಆದವು ಹಾಗೂ ಈ ವಿಚಾರ ಭಾರೀ ಚರ್ಚೆಗೆ ಗ್ರಾಸವಾಯಿತು. ಆಸ್ಟ್ರೇಲಿಯದ ಸ್ಟಾರ್ ಸ್ಟೀವ್ ಸ್ಮಿತ್ ಕೂಡ ಚರ್ಚೆಯಲ್ಲಿ ತೊಡಗಿಸಿಕೊಂಡು, ವಿಕೆಟ್ ಕೀಪರ್ ಅಲೆಕ್ಸ್ ಕ್ಷೌರವೇ ಮಾಡಿಲ್ಲ ಎಂದು ಹೇಳಿದರು.

"ನಾವು ಲಂಡನ್ ಗೆ ಬಂದ ನಂತರ ಅಲೆಕ್ಸ್ ಕ್ಯಾರಿಯವರು ಕ್ಷೌರ ಮಾಡಿಲ್ಲ ಎಂದು ನಾನು ದೃಢೀಕರಿಸಬಲ್ಲೆ. ನಿಮ್ಮ ಸತ್ಯಗಳನ್ನು ಸರಿಯಾಗಿ ತಿಳಿದುಕೊಳ್ಳಿ ದಿ ಸನ್" ಎಂದು ಹೊಸದಾಗಿ ಆರಂಭಿಸಲಾದ ಟ್ವಿಟರ್ ಪ್ರತಿಸ್ಪರ್ಧಿಯಾದ ಥ್ರೆಡ್ಸ್ ನಲ್ಲಿ ಸ್ಮಿತ್ ಬರೆದಿದ್ದಾರೆ.

ಕುಕ್ ಅವರ ಹೇಳಿಕೆಗಳು ಸುಳ್ಳೆಂದು ಕಂಡುಬಂದ ನಂತರ, ಅವರು ಕ್ಷಮೆಯಾಚಿಸಿದರು. ಬಹುಶಃ ಇದರಲ್ಲಿ ನನ್ನ ತಪ್ಪಿದೆ ಎಂದು ಹೇಳಿದರು.

''ಅಲೆಕ್ಸ್ ಹಣ ಪಾವತಿಸಿಲ್ಲ ಎಂದು ಕ್ಷೌರಿಕ ನನ್ನ ಬಳಿ ಹೇಳಿದರು" ಎಂದು 3ನೇ ಆಶಸ್ ಟೆಸ್ಟ್ನ ಆರಂಭಿಕ ದಿನದಂದು ಬಿಬಿಸಿ ಟೆಸ್ಟ್ ಪಂದ್ಯದ ವಿಶೇಷ ಕಾರ್ಯಕ್ರಮದಲ್ಲಿ ಕುಕ್ ಮಾತನಾಡುತ್ತಾ ಹೇಳಿದರು.

ಸಲೂನ್ ಮುಚ್ಚುವ ಮೊದಲು ಕ್ಷೌರ ಮಾಡಿಸಿಕೊಂಡ ಅಲೆಕ್ಸ್ ಸ್ವಲ್ಪ ಸಮಯದ ಬಳಿಕ ಹಣ ವರ್ಗಾವಣೆ ಮಾಡುವುದಾಗಿ ಭರವಸೆ ನೀಡಿದರು. ಇದು ನಿಜವಾದ ಕಥೆ, ನಾನು ಅದನ್ನು ಸೃಷ್ಟಿಸಿದ್ದಲ್ಲ ಎಂದು ಕುಕ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News