ಎರಡು ಬಾರಿ ಜೀವದಾನ ಪಡೆದು ಮತ್ತೊಂದು ಶತಕ ಗಳಿಸಿದ ದೇವದತ್ತ ಪಡಿಕ್ಕಲ್

Update: 2026-08-23 23:39 IST

Photo Credit : PTI 

ಕೊಲಂಬೊ: ಈಗ ನಡೆಯುತ್ತಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮತ್ತೊಂದು ಶತಕವನ್ನು ಗಳಿಸಿರುವ ಕನ್ನಡಿಗ ದೇವದತ್ತ ಪಡಿಕ್ಕಲ್ ಶ್ರೀಲಂಕಾ ತಂಡದ ವಿರುದ್ಧ ತನ್ನ ಶ್ರೇಷ್ಠ ಪ್ರದರ್ಶನ ಮುಂದುವರಿಸಿದರು.

ಗಾಲೆಯಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ 167 ರನ್ ಗಳಿಸಿದ್ದ ಎಡಗೈ ಬ್ಯಾಟರ್ ಪಡಿಕ್ಕಲ್ ಎರಡನೇ ಟೆಸ್ಟ್‌ನ ಮೊದಲ ದಿನದಾಟವಾದ ರವಿವಾರ ಮತ್ತೊಂದು ಶತಕ ದಾಖಲಿಸಿದರು.

ಪಡಿಕ್ಕಲ್ ಅಜೇಯ 91 ರನ್ ಗಳಿಸಿದ್ದಾಗ ಸ್ಪಿನ್ನರ್ ಪ್ರಭಾತ್ ಜಯಸೂರ್ಯ ಬೌಲಿಂಗ್‌ನಲ್ಲಿ ಸತತ ಎರಡು ಬೌಂಡರಿ ಗಳನ್ನು ಹಾಗೂ ಒಂದು ರನ್ ಗಳಿಸಿ ತನ್ನ ಶತಕ ಪೂರೈಸಿದರು. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಪಡಿಕ್ಕಲ್ ಗಳಿಸಿದ ಎರಡನೇ ಶತಕವಾಗಿದೆ.

ಮೈಲಿಗಲ್ಲನ್ನು ತಲುಪಿದ ನಂತರ ಪಡಿಕ್ಕಲ್ ತನ್ನ ಹೆಲ್ಮೆಟ್ ತೆಗೆದರು. ಆಗ ಡ್ರೆಸ್ಸಿಂಗ್‌ ರೂಮ್‌ನಲ್ಲಿದ್ದ ಸಹ ಆಟಗಾರರು ಚಪ್ಪಾಳೆ ತಟ್ಟಿ ಅಭಿನಂದಿಸಿದರು.

ಪಡಿಕ್ಕಲ್ ಇನಿಂಗ್ಸ್ ಆರಂಭದಲ್ಲಿ 0 ಹಾಗೂ 1 ರನ್ ಗಳಿಸಿದ್ದಾಗ ಜೀವದಾನ ಪಡೆದಿದ್ದರು. ಇದರ ಲಾಭ ಪಡೆದ ಪಡಿಕ್ಕಲ್ ಲಂಕಾದ ಬೌಲರ್ಗಳನ್ನು ಚೆನ್ನಾಗಿ ದಂಡಿಸಿದರು.

ಪಡಿಕ್ಕಲ್ ಗಾಲೆಯಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ 167 ರನ್ ಗಳಿಸಿದ್ದರು. ಶ್ರೀಲಂಕಾ ವಿರುದ್ಧ ಭಾರತ ತಂಡಕ್ಕೆ 165 ರನ್ ಗೆಲುವು ತಂದುಕೊಟ್ಟಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News