ಹಾಕಿ ವಿಶ್ವಕಪ್ | ನಾಳೆ ಭಾರತಕ್ಕೆ ಅರ್ಜೆಂಟೀನದ ಸವಾಲು

Update: 2026-08-23 23:15 IST

Photo Credit : Hockey India

ಆ್ಯಮ್ಸ್ಟೆಲ್ವೀನ್: ಪುರುಷರ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಸೆಮಿ ಫೈನಲ್ ಅವಕಾಶವನ್ನು ಸೃಷ್ಟಿಸಲು ಭಾರತ ತಂಡವು ಸೋಮವಾರ ಅರ್ಜೆಂಟೀನ ತಂಡದ ವಿರುದ್ದ ನಡೆಯಲಿರುವ ತನ್ನ ಎರಡನೇ ಸುತ್ತಿನ ಪಂದ್ಯವನ್ನು ದೊಡ್ಡ ಅಂತರದಿಂದ ಗೆಲ್ಲಬೇಕಾಗಿದೆ.

ನೆದರ್ಲ್ಯಾಂಡ್ಸ್ ವಿರುದ್ಧ 1-3 ಅಂತರದಿಂದ ಸೋತಿರುವ ಭಾರತ ತಂಡ ಸೆಮಿ ಫೈನಲ್ ರೇಸ್‌ನಿಂದ ಬಹುತೇಕ ಹೊರಬಿದ್ದಿದೆ. ಆದರೆ ಅರ್ಜೆಂಟೀನ ತಂಡವು ಶನಿವಾರ ಇಂಗ್ಲೆಂಡ್ ತಂಡವನ್ನು ಮಣಿಸಿದ ಹಿನ್ನೆಲೆಯಲ್ಲಿ ಭಾರತದ ಸೆಮಿ ಫೈನಲ್ ವಿಶ್ವಾಸ ಮತ್ತೆ ಚಿಗುರಿದೆ. ಸೋಮವಾರ ನಡೆಯಲಿರುವ ನೆದರ್ಲ್ಯಾಂಡ್ಸ್-ಇಂಗ್ಲೆಂಡ್ ನಡುವಿನ ಫಲಿತಾಂಶದ ಮೇಲೆ ಎಲ್ಲವೂ ಅವಲಂಬಿತವಾಗಿದೆ.

ನೆದರ್ಲ್ಯಾಂಡ್ಸ್ ತಂಡವು ಇಂಗ್ಲೆಂಡ್ ತಂಡವನ್ನು ಮಣಿಸಿದರೆ, ಭಾರತಕ್ಕೆ ಸೆಮಿ ಫೈನಲ್ ತಲುಪುವ ಅವಕಶಾಶ ಲಭಿಸಲಿದೆ. ಒಂದು ವೇಳೆೆ ಇಂಗ್ಲೆಂಡ್ ತಂಡವು ನೆದರ್ಲ್ಯಾಂಡ್ಸ್ ವಿರುದ್ಧ ಡ್ರಾ ಸಾಧಿಸಿದರೆ, ಇಲ್ಲವೇ ಮಣಿಸಿದರೆ, ಅರ್ಜೆಂಟೀನ ವಿರುದ್ಧ ಭಾರತ ಗೆದ್ದರೂ ಕೂಡ ಟೂರ್ನಿಯಿಂದ ಹೊರಗುಳಿಯಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News