ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಕರ್ಣ್ ಶರ್ಮಾ
Update: 2026-08-23 23:29 IST
Photo : ANI
ಹೊಸದಿಲ್ಲಿ: ಭಾರತದ ಮಾಜಿ ಲೆಗ್ ಸ್ಪಿನ್ನರ್ ಕರ್ಣ್ ಶರ್ಮಾ ತನ್ನ 38ನೇ ವಯಸ್ಸಿನಲ್ಲಿ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ. ಈ ಮೂಲಕ ಎರಡು ದಶಕಗಳ ವೃತ್ತಿಜೀವನಕ್ಕೆ ತೆರೆ ಎಳೆದರು.
ಶರ್ಮಾ ಭಾರತ ತಂಡದ ಪರ ಒಂದು ಟೆಸ್ಟ್, ಎರಡು ಏಕದಿನ ಹಾಗೂ ಒಂದು ಟಿ-20 ಪಂದ್ಯವನ್ನು ಆಡಿದ್ದಾರೆ. 2014ರ ನವೆಂಬರ್‌ನಲ್ಲಿ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದರು.
ಶರ್ಮಾ 2014ರಲ್ಲಿ ಅಡಿಲೇಡ್‌ನಲ್ಲಿ ಆಸ್ಟ್ರೇಲಿಯದ ವಿರುದ್ದ ಏಕೈಕ ಟೆಸ್ಟ್ ಪಂದ್ಯವನ್ನಾಡಿದ್ದರು. ಆನಂತರ ಅವಕಾಶ ಪಡೆಯಲಿಲ್ಲ. 97 ಪ್ರಥಮ ದರ್ಜೆ ಪಂದ್ಯಗಳಲ್ಲಿ 270 ವಿಕೆಟ್‌ಗಳನ್ನು ಪಡೆದಿರುವ ಶರ್ಮಾ ಉತ್ತರ ಪ್ರದೇಶ, ರೈಲ್ವೇಸ್, ವಿದರ್ಭ ಹಾಗೂ ಆಂಧ್ರ ತಂಡಗಳನ್ನು ಪ್ರತಿನಿಧಿಸಿದ್ದರು. ಆರ್‌ಸಿಬಿ, ಮುಂಬೈ ಇಂಡಿಯನ್ಸ್, ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಸಿಎಸ್‌ಕೆ ಪರ 90ಕ್ಕೂ ಅಧಿಕ ಐಪಿಎಲ್ ಪಂದ್ಯಗಳನ್ನಾಡಿದ್ದರು. ನಾಲ್ಕು ಐಪಿಎಲ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.