×
Ad

ಜು.22ರಿಂದ ಆ.23ರ ತನಕ ಡುರಾಂಡ್ ಕಪ್-2025 ಫುಟ್ಬಾಲ್ ಪಂದ್ಯಾವಳಿ

Update: 2025-05-25 22:18 IST

Photo Credit: Durand Cup Media

ಹೊಸದಿಲ್ಲಿ: ಏಶ್ಯದ ಅತ್ಯಂತ ಹಳೆಯ ಫುಟ್ಬಾಲ್ ಪಂದ್ಯಾವಳಿ 2025ರ ಆವೃತ್ತಿಯ ಡುರಾಂಡ್ ಕಪ್ ಐದು ರಾಜ್ಯಗಳಾದ್ಯಂತ ಜುಲೈ 23ರಿಂದ ಆಗಸ್ಟ್ 23ರ ತನಕ ನಡೆಯಲಿದೆ ಎಂದು ಸ್ಪರ್ಧಾವಳಿಯ ಆಯೋಜಕರು ರವಿವಾರ ಪ್ರಕಟಿಸಿದ್ದಾರೆ.

ಪಶ್ಚಿಮಬಂಗಾಳ, ಅಸ್ಸಾಂ, ಮಣಿಪುರ, ಮೇಘಾಲಯ ಹಾಗೂ ಜಾರ್ಖಂಡ್ ರಾಜ್ಯಗಳನ್ನು ಪಂದ್ಯಾವಳಿಯಲ್ಲಿ ಅಂತಿಮಗೊಳಿಸಲಾಗಿದೆ.

ನಾರ್ತ್ ಈಸ್ಟ್ ಯುನೈಟೆಡ್ ಎಫ್‌ಸಿ ಹಾಲಿ ಚಾಂಪಿಯನ್ ಆಗಿದ್ದು, ಕಳೆದ ವರ್ಷ ನಡೆದ ರೋಚಕ ಫೈನಲ್‌ನಲ್ಲಿ ಹೆಚ್ಚು ಬಾರಿ ಪ್ರಶಸ್ತಿ ಜಯಿಸಿದ್ದ ಮೋಹನ್ ಬಗಾನ್ ಸೂಪರ್ ಜಯಂಟ್ಸ್ ತಂಡವನ್ನು ಸೋಲಿಸಿ ತನ್ನ ಚೊಚ್ಚಲ ಪ್ರಶಸ್ತಿ ಜಯಿಸಿ ಇತಿಹಾಸ ನಿರ್ಮಿಸಿದೆ.

ಎರಡು ವರ್ಷಗಳ ನಂತರ ಇಂಫಾಲ್ ಪಂದ್ಯಾವಳಿಯ ಆತಿಥ್ಯವಹಿಸಲು ಸಜ್ಜಾಗಿದೆ. ಕೊಕ್ರಜಾರ್ ಸತತ 3ನೇ ವರ್ಷ ಟೂರ್ನಿಯ ಆತಿಥ್ಯವಹಿಸಲಿದೆ. ಜಾರ್ಖಂಡ್‌ನ ಜೆಮ್ಶೆಡ್‌ಪುರ ಹಾಗೂ ಮೇಘಾಲಯದ ಶಿಲ್ಲಾಂಗ್ ಕಳೆದ ವರ್ಷ ಆತಿಥೇಯ ತಂಡವಾಗಿ ಸೇರಿಸಲಾಗಿತ್ತು.

ಶತಮಾನಗಳಷ್ಟು ಹಳೆಯ ಪಂದ್ಯಾವಳಿಯನ್ನು 2019ರಲ್ಲಿ ಕೋಲ್ಕತಾದಿಂದ ದಿಲ್ಲಿಗೆ ಸ್ಥಳಾಂತರಿಸಲಾಗಿತ್ತು. ಸತತ 6ನೇ ಆವೃತ್ತಿಯ ಟೂರ್ನಿಯನ್ನು ಆಯೋಜಿಸಲು ಸಜ್ಜಾಗಿದೆ.

ಮೂರು ಸೇವೆಗಳ ಪರವಾಗಿ ಭಾರತೀಯ ಸೇನೆಯ ಪೂರ್ವ ಕಮಾಂಡ್ ಆಯೋಜಿಸಿರುವ ಈ ಪಂದ್ಯಾವಳಿಯಲ್ಲಿ ಸರ್ವಿಸಸ್ ತಂಡಗಳು ಭಾರತದ ಅತ್ಯುತ್ತಮ ಫುಟ್ಬಾಲ್ ಕ್ಲಬ್‌ಗಳ ಎದುರು ಸ್ಪರ್ಧಿಸಲಿವೆ.

*2025ರ ಆವೃತ್ತಿಯ ಡುರಾಂಡ್ ಕಪ್ ಟೂರ್ನಿಯ ಸ್ಥಳಗಳ ಪಟ್ಟಿ

ವಿವೇಕಾನಂದ ಯುವ ಭಾರತಿ ಕ್ರೀಡಾಂಗಣ, ಕೋಲ್ಕತ್ತಾ

ಕಿಶೋರ್ ಭಾರತಿ, ಕ್ರೀಡಾಂಗಣ, ಕೋಲ್ಕತ್ತಾ

ಜೆಆರ್‌ಡಿ ಟಾಟಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಜೆಮ್ಶೆಡ್‌ಪುರ

ಅಥವಾ ಮೊರ್ಹಬಾದಿ ಕ್ರೀಡಾಂಗಣ, ರಾಂಚಿ

ಖುಮಾನ್ ಲಂಪಾಕ್ ಸ್ಟೇಡಿಯಮ್, ಇಂಫಾಲ್

ಜವಾಹರಲಾಲ್ ನೆಹರೂ ಸ್ಟೇಡಿಯಮ್, ಶಿಲ್ಲಾಂಗ್

ಸಾಯಿ ಸ್ಟೇಡಿಯಮ್, ಕೊಕ್ರಜಾರ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News