×
Ad

ಯೂರೊ-2024: ಆಸ್ಟ್ರಿಯಾ ವಿರುದ್ಧ ಟರ್ಕಿಗೆ ರೋಚಕ ಜಯ

Update: 2024-07-03 10:13 IST

PC: X

ಮೆರ್ಹಿ ಡೆಮಿರಲ್ ಅವರ ಅವಳಿ ಗೋಲುಗಳ ನೆರವಿನಿಂದ ಯೂರೊ- 2024 ಪಂದ್ಯಾವಳಿಯ ಹದಿನಾರರ ಘಟ್ಟದ ಪಂದ್ಯದಲ್ಲಿ ಟರ್ಕಿ ತಂಡ ಆಸ್ಟ್ರಿಯಾ ವಿರುದ್ಧ ರೋಚಕ ಜಯ ಸಾಧಿಸಿತು. ಈ ಮೂಲಕ ಟರ್ಕಿ ತಂಡ ಕ್ವಾರ್ಟರ್ ಫೈನಲ್ ತಲುಪಿದೆ.

ಮೈಕೆಲ್ ಗ್ರೆಗೊರಿಚ್ ಒಂದು ಗಂಟೆ ಮುಕ್ತಾಯದ ವೇಳೆಗೆ ಗೋಲು ಬಾರಿಸಿದ ಬಳಿಕ ಸಮಬಲ ಸಾಧಿಸಲು ಆಸ್ಟ್ರಿಯಾ ತನ್ನೆಲ್ಲ ಪ್ರಯತ್ನವನ್ನು ಒಗ್ಗೂಡಿಸಿತು. ಆದರೆ ಟರ್ಕಿ ಗೋಲ್ ಕೀಪರ್ ಮೆರ್ಟ್ ಗುನಾಕ್ ಅದ್ಭುತವಾಗಿ ಗೋಲು ತಡೆಯುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಕೊನೆಯ ನಿಮಿಷದಲ್ಲಿ ಆಸ್ಟ್ರಿಯಾ ಆಟಗಾರರ ಪ್ರಯತ್ನವನ್ನು ಗೋಲ್ ಕೀಪರ್ ಯಶಸ್ವಿಯಾಗಿ ತಡೆಯುವ ಮೂಲಕ ಟರ್ಕಿ ಗೆಲುವಿನ ನಗೆ ಬೀರಿತು. ಕೊನೆಯ ಐದು ನಿಮಿಷಲ್ಲಿ ಆಸ್ಟ್ರಿಯಾ ಚೆಂಡಿನ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದರೂ, ಯಿಲ್ಮಝ್ ಗೆ ಟರ್ಕಿಗೆ ವಿಜಯ ಮಾಲೆಯನ್ನು ಒಲಿಸುವ ಅಚ್ಚರಿಯ ಅವಕಾಶ ದೊರಕಿತು. ಆದರೆ ಅವರ ಶಾಟ್ ಅತ್ಯಂತ ಶಕ್ತಿಶಾಲಿಯಾಗಿ, ಗೋಲು ದೊರಕಲಿಲ್ಲ.

ಪಂದ್ಯದಲ್ಲಿ ದಾಖಲಾದ ಎಲ್ಲ ಮೂರು ಗೋಲುಗಳು ಕಾರ್ನರ್ನಿಂದ ಬಂದವು. ಮೈಕೆಲ್ ಗ್ರೆಗೋರಿಚ್ ಆಸ್ಟ್ರಿಯಾ ಪರ ಗೋಲು ಸಾಧಿಸಿದರು. ಗ್ರೆಗೊರಿಚ್ ಯಾವ ತಪ್ಪಿಗೂ ಅವಕಾಶ ನೀಡದೇ, ಕಾರ್ನರ್ ನಿಂದ ಬಲವಾಗಿ ಒದ್ದ ಚೆಂಡು ಸುಲಭವಾಗಿ ಗೋಲುಪೆಟ್ಟಿಗೆ ಸೇರಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News