×
Ad

ಮಳೆ ಆಗಮಿಸಿದಾಗ ಮೈದಾನದ ಸಿಬ್ಬಂದಿ ಜೊತೆ ಕೈಜೋಡಿಸಿದ ಫಖರ್ ಝಮಾನ್!

Update: 2023-09-10 22:21 IST

ಫಖರ್ ಝಮಾನ್ | Photo: Twitter

ಕೊಲಂಬೊ: ಭಾರೀ ಮಳೆಯು ಭಾರತ ಹಾಗೂ ಪಾಕ್ ನಡುವಿನ ಏಶ್ಯಕಪ್ ನ ಸೂಪರ್-4 ಪಂದ್ಯಕ್ಕೆ ಅಡ್ಡಿಪಡಿಸಿದಾಗ ಪಾಕಿಸ್ತಾನದ ಆರಂಭಿಕ ಬ್ಯಾಟರ್ ಫಖರ್ ಝಮಾನ್ ಕೊಲಂಬೊದ ಆರ್.ಪ್ರೇಮದಾಸ ಸ್ಟೇಡಿಯಂ ಸಿಬ್ಬಂದಿಗೆ ಸಹಾಯ ಹಸ್ತ ಚಾಚಿ ಎಲ್ಲರ ಹೃದಯ ಗೆದ್ದಿದ್ದಾರೆ.

ಭಾರತ-ಪಾಕ್ ಪಂದ್ಯಕ್ಕೆ ಭಾರೀ ಮಳೆ ಅಡ್ಡಿಪಡಿಸಿದಾಗ ಝಮಾನ್ ಅವರು ಮೈದಾನದ ಸಿಬ್ಬಂದಿಯ ಜೊತೆಗೆ ಮೈದಾನದಲ್ಲಿ ಹೊದಿಕೆಯನ್ನು ಎಳೆಯುತ್ತಿರುವುದು ಕಂಡುಬಂದಿದೆ.

ಭಾರತ ಹಾಗೂ ಪಾಕಿಸ್ತಾನದ ಆಟಗಾರರು ಅಂಪೈರ್ ಗಳೊಂದಿಗೆ ಮೈದಾನದಿಂದ ಹೊರ ಹೋಗುತ್ತಿರುವಾಗ ಝಮಾನ್ ಮಾತ್ರ ಮೈದಾನ ಒದ್ದೆಯಾಗುವುದರಿಂದ ರಕ್ಷಿಸಲು ತನ್ನಿಂದಾದ ಪ್ರಯತ್ನ ಮಾಡಿ ಎಲ್ಲರ ಮನ ಗೆದ್ದರು.

ಆಯೋಜಕರು ಕೊನೆಯ ಕ್ಷಣದಲ್ಲಿ ಈ ಪಂದ್ಯಕ್ಕೆ ಮೀಸಲು ದಿನ ನಿಗದಿಪಡಿಸಿದ್ದು, ಸೂಪರ್-4 ಸುತ್ತಿನಲ್ಲಿ ಈ ಪಂದ್ಯಕ್ಕೆ ಮಾತ್ರ ಈ ವ್ಯವಸ್ಥೆ ಇದೆ. ಈ ಹಿಂದೆ ಪಲ್ಲೆಕೆಲೆಯಲ್ಲಿ ಉಭಯ ತಂಡಗಳ ನಡುವಿನ ಗ್ರೂಪ್ ಪಂದ್ಯವು ಮಳೆಗಾಹುತಿಯಾಗಿತ್ತು. ಆಗ ಎರಡೂ ತಂಡಗಳು ತಲಾ 1 ಅಂಕ ಹಂಚಿಕೊಂಡಿದ್ದವು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News