×
Ad

ಆಸ್ಟ್ರೇಲಿಯ ನೆಲದಲ್ಲಿ ಮೊತ್ತ ಮೊದಲ ಬಾರಿ ಶತಕ ಸಿಡಿಸಿದ ಜೋ ರೂಟ್

Update: 2025-12-04 22:28 IST

 ಜೋ ರೂಟ್ | Photo Credit : AP \ PTI  

ಪರ್ತ್: ಕಳೆದೊಂದು ದಶಕದಲ್ಲಿ ನಾಲ್ಕು ಬಾರಿ ಆಸ್ಟ್ರೇಲಿಯಕ್ಕೆ ಕ್ರಿಕೆಟ್ ಪ್ರವಾಸ ಕೈಗೊಂಡಿದ್ದ ಜೋ ರೂಟ್ 16 ಪಂದ್ಯಗಳು, 30 ಇನಿಂಗ್ಸ್‌ಗಳ ನಂತರ ಕೊನೆಗೂ ಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾದರು. ಇಂಗ್ಲೆಂಡ್ ಬ್ಯಾಟರ್ ಗುರುವಾರ ಬ್ರಿಸ್ಬೇನ್‌ನಲ್ಲಿ ಆರಂಭವಾದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯದ ಮಣ್ಣಿನಲ್ಲಿ ತನ್ನ ಚೊಚ್ಚಲ ಶತಕ ದಾಖಲಿಸಿದರು.

ಇಂಗ್ಲೆಂಡ್ ಸಂಕಷ್ಟದಲ್ಲಿದ್ದಾಗ ಆಸರೆಯಾದ ರೂಟ್ 181 ಎಸೆತಗಳಲ್ಲಿ ಶತಕದ ಮೈಲಿಗಲ್ಲು ತಲುಪಿದರು. ರೂಟ್ ಈ ಹಿಂದೆ ಆಸ್ಟ್ರೇಲಿಯ ನೆಲದಲ್ಲಿ 89 ರನ್ ಗಳಿಸಿದ್ದರು. ಆದರೆ ಅವರಿಗೆ ಶತಕ ಗಳಿಸಲು ಸಾಧ್ಯವಾಗಿರಲಿಲ್ಲ.

ಜೋ ರೂಟ್ ಗುರುವಾರ ತನ್ನ ವೃತ್ತಿಜೀವನದ 40ನೇ ಶತಕ ಸಿಡಿಸಿದರು. ಆಸ್ಟ್ರೇಲಿಯದ ಮಾಜಿ ನಾಯಕ ರಿಕಿ ಪಾಂಟಿಂಗ್(41 ಶತಕಗಳು)ಗಿಂತ ಒಂದು ಶತಕದಿಂದ ಹಿಂದಿದ್ದಾರೆ.

ರೂಟ್ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ಶತಕಗಳನ್ನು ಸಿಡಿಸಿದವರ ಪಟ್ಟಿಯಲ್ಲಿ ಸಚಿನ್ ತೆಂಡುಲ್ಕರ್(51), ಜಾಕಸ್ ಕಾಲಿಸ್(45)ಹಾಗೂ ರಿಕಿ ಪಾಂಟಿಂಗ್(41)ನಂತರ ನಾಲ್ಕನೇ ಸ್ಥಾನದಲ್ಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News