×
Ad

ಭಾರತದ ವಿರುದ್ದ ಏಳನೇ ಶತಕ ಗಳಿಸಿ ದಾಖಲೆ ನಿರ್ಮಿಸಿದ ಕ್ವಿಂಟನ್ ಡಿಕಾಕ್

Update: 2025-12-06 21:52 IST

ಕ್ವಿಂಟನ್ ಡಿಕಾಕ್ | Photo Credit : AP \ PTI 

ವಿಶಾಖಪಟ್ಟಣ, ಡಿ.6: ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್ ಶನಿವಾರ ನಡೆದ ಮೂರನೇ ಏಕದಿನ ಪಂದ್ಯದ ವೇಳೆ ಭಾರತ ತಂಡದ ವಿರುದ್ಧ ತನ್ನ ಏಳನೇ ಏಕದಿನ ಅಂತರ್‌ರಾಷ್ಟ್ರೀಯ ಶತಕವನ್ನು ದಾಖಲಿಸಿದರು. 30ನೇ ಓವರ್‌ ನಲ್ಲಿ 80 ಎಸೆತಗಳಲ್ಲಿ ಹರ್ಷಿತ್ ರಾಣಾ ಬೌಲಿಂಗ್‌ನಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಶತಕ ಪೂರೈಸಿದರು.

ಭಾರತ ತಂಡದ ವಿರುದ್ಧ ಕೇವಲ 23 ಇನಿಂಗ್ಸ್‌ಗಳಲ್ಲಿ ಡಿಕಾಕ್ ಏಳನೇ ಏಕದಿನ ಶತಕ ದಾಖಲಿಸಿದರು. ಇದರೊಂದಿಗೆ ಸನತ್ ಜಯಸೂರ್ಯ ಅವರ ದಾಖಲೆಯನ್ನು ಸರಿಗಟ್ಟಿದರು. ಜಯಸೂರ್ಯ ಕೂಡ 85 ಇನಿಂಗ್ಸ್‌ಗಳಲ್ಲಿ ಏಳು ಶತಕಗಳನ್ನು ಗಳಿಸಿದ್ದರು.

ಭಾರತದಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಪ್ರವಾಸಿ ತಂಡದ ಬ್ಯಾಟರ್ ಎನಿಸಿಕೊಂಡಿರುವ ಡಿಕಾಕ್ ತಮ್ಮದೇ ದೇಶದ ಎಬಿ ಡಿವಿಲಿಯರ್ಸ್ ದಾಖಲೆ(7 ಶತಕ)ಯನ್ನು ಸರಿಗಟ್ಟಿದರು.

ಕನಿಷ್ಠ 100 ಏಕದಿನ ಇನಿಂಗ್ಸ್‌ಗಳನ್ನು ಆಡಿರುವ ಬ್ಯಾಟರ್‌ಗಳ ಪೈಕಿ ಡಿಕಾಕ್ ಅವರು ಶೇ.41.81 ದರದಲ್ಲಿ ಅರ್ಧಶತಕವನ್ನು ಶತಕವನ್ನಾಗಿ ಪರಿವರ್ತಿಸಿದ ಸಾಧನೆ ಮಾಡಿದ್ದಾರೆ. ಇದರೊಂದಿಗೆ ವಿರಾಟ್ ಕೊಹ್ಲಿ(41.40 ಶೇ.)ಹಾಗೂ ಹಾಶೀಂ ಅಮ್ಲ(40.91 ಶೇ.)ದಾಖಲೆಯನ್ನು ಹಿಂದಿಕ್ಕಿದ್ದಾರೆ.

ಡಿಕಾಕ್ ಅವರು ವಿದೇಶಿ ನೆಲದಲ್ಲಿ ಗರಿಷ್ಠ ಏಕದಿನ ಶತಕಗಳನ್ನು ಗಳಿಸಿದ ಆಟಗಾರರ ಸಾಲಿಗೆ ಸೇರ್ಪಡೆಯಾದರು. ಸಚಿನ್ ತೆಂಡುಲ್ಕರ್ ಹಾಗೂ ಸಯೀದ್ ಅನ್ವರ್ ಅವರು ಯುಎಇನಲ್ಲಿ ತಲಾ ಏಳು ಶತಕ ಹಾಗೂ ಡಿವಿಲಿಯರ್ಸ್ ಭಾರತದಲ್ಲಿ ಹಾಗೂ ರೋಹಿತ್ ಶರ್ಮಾ ಇಂಗ್ಲೆಂಡ್‌ನಲ್ಲಿ 7 ಶತಕಗಳನ್ನು ದಾಖಲಿಸಿದ್ದಾರೆ.

ಡಿಕಾಕ್ ಅವರು ನಿಯೋಜಿತ ವಿಕೆಟ್‌ಕೀಪರ್ ಆಗಿ ಒಂದೇ ಎದುರಾಳಿಯ ಎದುರು ಗರಿಷ್ಠ ಶತಕಗಳನ್ನು ಸಿಡಿಸಿದ್ದಾರೆ. ಭಾರತ ವಿರುದ್ಧ ಏಳನೇ ಶತಕ ಸಿಡಿಸುವುದರೊಂದಿಗೆ ಶ್ರೀಲಂಕಾ ವಿರುದ್ಧ ಆ್ಯಡಮ್ ಗಿಲ್‌ಕ್ರಿಸ್ಟ್(6)ಹಾಗೂ ಭಾರತ ವಿರುದ್ಧ ಕುಮಾರ ಸಂಗಕ್ಕರ(6)ನಿರ್ಮಿಸಿದ್ದ ಬ್ಯಾಟಿಂಗ್ ದಾಖಲೆ ಮುರಿದರು.

ಭಾರತದಲ್ಲಿ ಗರಿಷ್ಠ ಶತಕ ಗಳಿಸಿದ ಆಟಗಾರರು

7-ಕ್ವಿಂಟನ್ ಡಿಕಾಕ್(23 ಇನಿಂಗ್ಸ್)

7-ಸನತ್ ಜಯಸೂರ್ಯ(85 ಇನಿಂಗ್ಸ್)

6-ಎಬಿ ಡಿ ವಿಲಿಯರ್ಸ್(32 ಇನಿಂಗ್ಸ್)

6- ರಿಕಿ ಪಾಂಟಿಂಗ್(59 ಇನಿಂಗ್ಸ್)

6- ಕುಮಾರ ಸಂಗಕ್ಕರ(71 ಇನಿಂಗ್ಸ್)

*ಗರಿಷ್ಠ ಏಕದಿನ ಶತಕ ಗಳಿಸಿದ ನಿಯೋಜಿತ ವಿಕೆಟ್‌ಕೀಪರ್‌ಗಳು

23-ಕುಮಾರ ಸಂಗಕ್ಕರ

23-ಕ್ವಿಂಟನ್ ಡಿಕಾಕ್

19-ಶಾಯ್ ಹೋಪ್

16-ಆ್ಯಡಮ್ ಗಿಲ್‌ಕ್ರಿಸ್ಟ್

11-ಜೋಸ್ ಬಟ್ಲರ್

10-ಎಬಿಡಿ ವಿಲಿಯರ್ಸ್, ಎಂ.ಎಸ್.ಧೋನಿ

ಒಂದೇ ಎದುರಾಳಿಯ ವಿರುದ್ದ ಗರಿಷ್ಠ ಶತಕ ಗಳಿಸಿದ ನಿಯೋಜಿತ ವಿಕೆಟ್‌ಕೀಪರ್‌ಗಳು

7-ಕ್ವಿಂಟನ್ ಡಿಕಾಕ್-ಭಾರತ ವಿರುದ್ಧ

6-ಆ್ಯಡಮ್ ಗಿಲ್‌ಕ್ರಿಸ್ಟ್-ಶ್ರೀಲಂಕಾ ವಿರುದ್ಧ

6-ಕುಮಾರ ಸಂಗಕ್ಕರ-ಭಾರತ ವಿರುದ್ಧ

5-ಕುಮಾರ ಸಂಗಕ್ಕರ-ಬಾಂಗ್ಲಾದೇಶ ವಿರುದ್ಧ

4-ಕ್ವಿಂಟನ್ ಡಿಕಾಕ್-ಶ್ರೀಲಂಕಾ ವಿರುದ್ಧ

4-ಕುಮಾರ ಸಂಗಕ್ಕರ-ಇಂಗ್ಲೆಂಡ್ ವಿರುದ್ಧ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News