FIFA 2026 | ಫೈನಲ್ ಪಂದ್ಯಕ್ಕೆ ಕಾಡ್ಗಿಚ್ಚಿನ ಹೊಗೆಯ ಕಾಟ: ಕೆನಡಾವನ್ನು ದೂಷಿಸಿದ ಟ್ರಂಪ್

Update: 2026-07-18 21:34 IST

ಡೊನಾಲ್ಡ್ ಟ್ರಂಪ್ | Photo Credit : PTI 

ನ್ಯೂ ಜೆರ್ಸಿ,ಜು.18: ಈಶಾನ್ಯ ಅಮೆರಿಕದ ಕೆಲವು ಭಾಗಗಳನ್ನು ಆವರಿಸಿರುವ ಕಾಡ್ಗಿಚ್ಚಿನ ಹೊಗೆಯು ಫಿಫಾ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದ ವಾತಾವರಣವನ್ನು ಕಲುಷಿತಗೊಳಿಸಿದೆ. ಇದಕ್ಕೆ ಕೆನಡಾವನ್ನು ದೂಷಿಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವಿವಾರ ನಡೆಯಲಿರುವ ಫಿಫಾ ವಿಶ್ವಕಪ್ ಟೂರ್ನಿಯ ಫೈನಲ್‌ಗೆ ರಾಜಕೀಯ ಬಣ್ಣ ಬಳಿದಿದ್ದಾರೆ.

‘ಅಮೆರಿಕವನ್ನು ಕೊಳಕು, ಕಲುಷಿತ ಹಾಗೂ ಅನಾರೋಗ್ಯಕರ ಗಾಳಿಯಿಂದ ಅನಗತ್ಯವಾಗಿ ಆಕ್ರಮಿಸಲಾಗಿದೆ. ಗಾಳಿಯ ಗುಣಮಟ್ಟ ಅಪಾಯಕಾರಿ ಹಾಗೂ ಸಂಪೂರ್ಣ ಅಸ್ವೀಕಾರಾರ್ಹವಾಗಿದೆ’ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಕಾಡ್ಗಿಚ್ಚಿನ ದಟ್ಟ ಹೊಗೆಗಾಗಿ ಕೆನಡಾದ ಮೇಲೆ ಹೊಸ ಸುಂಕಗಳನ್ನು ವಿಧಿಸುವ ಬೆದರಿಕೆ ಹಾಕಿದ್ದಾರೆ.

ನ್ಯೂಜೆರ್ಸಿ ಸ್ಟೇಡಿಯಂನಲ್ಲಿ ರವಿವಾರ ನಡೆಯಲಿರುವ ಫೈನಲ್ ಪಂದ್ಯಕ್ಕಿಂತ ಮೊದಲು ಆಯೋಜಕರು, ತಂಡಗಳು ಹಾಗೂ ಹವಾಮಾನಶಾಸ್ತ್ರಜ್ಞರು ಗಾಳಿಯ ಗುಣಮಟ್ಟವನ್ನು ನಿಕಟವಾಗಿ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.

ಶನಿವಾರ ಭಾರೀ ಮಳೆಯ ನಂತರ ಮತ್ತೊಂದು ಸುತ್ತಿನ ಹೊಗೆ ಆವರಿಸಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಹೊಗೆಯನ್ನು ನಿರ್ಲಕ್ಷಿಸಲು ಅಸಾಧ್ಯವೆಂದು ಒಪ್ಪಿಕೊಂಡ ಸ್ಪೇನ್ ಮಿಡ್ ಫೀಲ್ಡರ್ ಮಿಕೆಲ್ ಮೆರಿನೊ, ನ್ಯೂಜೆರ್ಸಿಯನ್ನು ಆವರಿಸಿರುವ ಹೊಗೆಯನ್ನುನೋಡಬಹುದಾಗಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News