ಮೊದಲ ಏಕದಿನ: ಆಸ್ಟ್ರೇಲಿಯ ತಂಡವನ್ನು ಬ್ಯಾಟಿಂಗ್ ಗೆ ಇಳಿಸಿದ ಭಾರತ
Update: 2023-09-22 13:53 IST
Photo: PTI
ಮೊಹಾಲಿ, ಸೆ.22: ಆಸ್ಟ್ರೇಲಿಯ ಕ್ರಿಕೆಟ್ ತಂಡದ ವಿರುದ್ಧ ಶುಕ್ರವಾರ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಜಯಿಸಿರುವ ಭಾರತದ ನಾಯಕ ಕೆ,ಎಲ್. ರಾಹುಲ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ.
ಮೊದಲ ಓವರ್ ನ 4ನೇ ಎಸೆತದಲ್ಲಿ ಮಿಚೆಲ್ ಮಾರ್ಷ್ ವಿಕೆಟನ್ನು ಕಳೆದುಕೊಂಡಿರುವ ಆಸ್ಟ್ರೇಲಿಯವು ಕಳಪೆ ಆರಂಭ ಪಡೆದಿದೆ. ವೇಗದ ಬೌಲರ್ ಮುಹಮ್ಮದ್ ಶಮಿ ಆಸೀಸ್ ಗೆ ಆರಂಭಿಕ ಆಘಾತ ನೀಡಿದರು.
ಭಾರತ ತಂಡವು ಋತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಅಶ್ವಿನ್ ಹಾಗೂ ಮುಹಮ್ಮದ್ ಶಮಿಯವರನ್ನು ಆಡುವ 11ರ ಬಳಗಕ್ಕೆ ಸೇರಿಸಿಕೊಂಡಿದೆ. ಆಸ್ಟ್ರೇಲಿಯವು ಮ್ಯಾಟ್ ಶಾರ್ಟ್ ಗೆ ಚೊಚ್ಚಲ ಪಂದ್ಯವನ್ನಾಡುವ ಅವಕಾಶ ನೀಡಿದೆ.