×
Ad

ಮೊದಲ ಯೂತ್ ಟೆಸ್ಟ್ : ಮಿಂಚಿದ ವೈಭವ್, ವೇದಾಂತ್

ಆಸ್ಟ್ರೇಲಿಯ ವಿರುದ್ಧ ಭಾರತದ ಅಂಡರ್-19 ಕ್ರಿಕೆಟ್ ತಂಡಕ್ಕೆ ಭರ್ಜರಿ ಜಯ

Update: 2025-10-02 19:54 IST

Photo Credit : X \ @Indianpeople218

ಹೊಸದಿಲ್ಲಿ, ಅ.2: ಬ್ರಿಸ್ಬೇನ್‌ನಲ್ಲಿ ಗುರುವಾರ ಕೊನೆಗೊಂಡಿರುವ ಮೊದಲ ಯೂತ್ ಟೆಸ್ಟ್ ಪಂದ್ಯದಲ್ಲಿ ಭಾರತದ ಅಂಡರ್-19 ತಂಡವು ಆತಿಥೇಯ ಆಸ್ಟ್ರೇಲಿಯ ಅಂಡರ್-19 ತಂಡವನ್ನು ಇನಿಂಗ್ಸ್ ಹಾಗೂ 58 ರನ್‌ಗಳ ಅಂತರದಿಂದ ಜಯಶಾಲಿಯಾದರು.

1 ವಿಕೆಟ್ ನಷ್ಟಕ್ಕೆ 8 ರನ್‌ನಿಂದ ತನ್ನ 2ನೇ ಇನಿಂಗ್ಸ್ ಮುಂದುವರಿಸಿದ ಆಸ್ಟ್ರೇಲಿಯ ಅಂಡರ್-19 ತಂಡವು ಇನಿಂಗ್ಸ್ ಹಿನ್ನಡೆಯಿಂದ ಚೇತರಿಸಿಕೊಳ್ಳುವಲ್ಲಿ ವಿಫಲವಾಗಿ 49.3 ಓವರ್‌ಗಳಲ್ಲಿ ಕೇವಲ 127 ರನ್‌ಗೆ ಆಲೌಟಾಯಿತು.

ವೈಭವ್ ಸೂರ್ಯವಂಶಿ ಹಾಗೂ ವೇದಾಂತ್ ತ್ರಿವೇದಿ ಅವರ ಶತಕಗಳ ನೆರವಿನಿಂದ ಭಾರತ ತಂಡವು ತನ್ನ ಬ್ಯಾಟಿಂಗ್‌ನಲ್ಲಿ ಮಿಂಚಿತ್ತು.

ಮೊದಲ ಇನಿಂಗ್ಸ್‌ನಲ್ಲಿ ಮಧ್ಯಮ ವೇಗದ ಬೌಲರ್ ದೀಪೇಶ್ ದೇವೇಂದ್ರನ್ 5 ವಿಕೆಟ್ ಗೊಂಚಲು ಕಬಳಿಸಿದರು. ಆಸೀಸ್‌ನ ಇನ್ನುಳಿದ ವಿಕೆಟ್‌ಗಳನ್ನು ಕಿಶನ್ ಕುಮಾರ್, ಖಿಲನ್ ಪಟೇಲ್ ಹಾಗೂ ಅನ್ಮೋಲ್‌ಜೀತ್ ಸಿಂಗ್ ಕಬಳಿಸಿದರು.

2ನೇ ಹಾಗೂ ಅಂತಿಮ ಯೂತ್ ಟೆಸ್ಟ್ ಪಂದ್ಯವು ಅ.7ರಿಂದ ಮಕಾಯ್‌ನಲ್ಲಿ ಆರಂಭವಾಗಲಿದ್ದು, ಭಾರತವು ಗೆಲುವಿನ ಓಟವನ್ನು ಮುಂದುವರಿಸುವ ವಿಶ್ವಾಸದಲ್ಲಿದೆ. ಭಾರತವು ಈಗಾಗಲೇ ಯೂತ್ ಏಕದಿನ ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡಿದೆ.

ಸಂಕ್ಷಿಪ್ತ ಸ್ಕೋರ್

► ಆಸ್ಟ್ರೇಲಿಯ ಅಂಡರ್-19: 243 ಹಾಗೂ 127(ಆರ್ಯನ್ ಶರ್ಮಾ 43, ಖಿಲನ್ ಪಟೇಲ್ 3-19, ದೀಪೇಶ್ 3-16, ಕಿಶನ್ ಕುಮಾರ್ 2-16)

► ಭಾರತದ ಅಂಡರ್-19: 428 ರನ್ (ವೇದಾಂತ್ ತ್ರಿವೇದಿ, ವೈಭವ್ ಸೂರ್ಯವಂಶಿ 113)

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News