×
Ad

Virat Kohli ದಾಖಲೆಯನ್ನು ಹಿಂದಿಕ್ಕಿದ ಹಾರ್ದಿಕ್ ಪಾಂಡ್ಯ

Update: 2026-01-23 23:00 IST

ಹಾರ್ದಿಕ್ ಪಾಂಡ್ಯ , ಕೊಹ್ಲಿ | Photo Credit : PTI 

ರಾಯ್ಪುರ, ಜ.23: ನ್ಯೂಝಿಲ್ಯಾಂಡ್ ವಿರುದ್ಧ ಶುಕ್ರವಾರ ನಡೆದ ಎರಡನೇ ಟಿ-20 ಪಂದ್ಯದಲ್ಲಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ದೇಶದ ಪರ ಗರಿಷ್ಠ ಟಿ-20 ಪಂದ್ಯವನ್ನಾಡಿದ ಎರಡನೇ ಆಟಗಾರರಾದರು.

126ನೇ ಪಂದ್ಯವನ್ನಾಡಿದ ಪಾಂಡ್ಯ, 125 ಪಂದ್ಯಗಳನ್ನಾಡಿದ್ದ ವಿರಾಟ್ ಕೊಹ್ಲಿಯ ದಾಖಲೆಯನ್ನು ಹಿಂದಿಕ್ಕಿದ್ದಾರೆ.

2024ರಲ್ಲಿ ನಿವೃತ್ತಿಯಾಗಿರುವ ಮಾಜಿ ನಾಯಕ ರೋಹಿತ್ ಶರ್ಮಾ ಮಾತ್ರ 159 ಟಿ-20 ಪಂದ್ಯಗಳೊಂದಿಗೆ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಹಾರ್ದಿಕ್ ಪಾಂಡ್ಯ ಅವರು 126 ಟಿ-20 ಪಂದ್ಯಗಳಲ್ಲಿ 2,027 ರನ್ ಹಾಗೂ 102 ವಿಕೆಟ್‌ಗಳನ್ನು ಪಡೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News