ಗುಜರಾತ್ ವಿರುದ್ಧ ಭರ್ಜರಿ ಜಯ ; ಮುಂಬೈ ಮಡಿಲಿಗೆ ವಿಜಯ್ ಮರ್ಚೆಂಟ್ ಟ್ರೋಫಿ
Photo: @ajinkyasnaik \X
ಮುಂಬೈ: ಆಲೂರಿನಲ್ಲಿ ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ ಗುಜರಾತ್ ತಂಡವನ್ನು ಇನಿಂಗ್ಸ್ ಹಾಗೂ 38 ರನ್ ಅಂತರದಿಂದ ಮಣಿಸಿರುವ ಮುಂಬೈ ತಂಡ 16 ವರ್ಷದೊಳಗಿನವರ ವಿಜಯ್ ಮರ್ಚೆಂಟ್ ಟ್ರೋಫಿಯನ್ನು ಮಡಿಲಿಗೆ ಹಾಕಿಕೊಂಡಿದೆ.
ಮುಂಬೈ ತಂಡ ಗುಜರಾತ್ ತಂಡವನ್ನು 193 ರನ್ಗೆ ಆಲೌಟ್ ಮಾಡಿದ್ದು, ನಿಕಾಶ್ ನೆರೂರ್ಕರ್(4-56), ವೇದಾಂತ್ ಗುರವ್(3-36) ಹಾಗೂ ಪಾರ್ಸೂನ್ ಸಿಂಗ್(3-47) ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು.
ಮೊದಲ ಇನಿಂಗ್ಸ್ ನಲ್ಲಿ ಗುಜರಾತ್ ತಂಡವನ್ನು 145 ರನ್ ಗೆ ಸರ್ವಪತನಗೊಳಿಸಿದ್ದ ಮುಂಬೈ ತಂಡ ಶುಕ್ರವಾರ ತನ್ನ ಮೊದಲ ಇನಿಂಗ್ಸ್ ನಲ್ಲಿ 7 ವಿಕೆಟ್ ನಷ್ಟಕ್ಕೆ 331 ರನ್ನಿಂದ ಬ್ಯಾಟಿಂಗ್ ಮುಂದುವರಿಸಿ 376 ರನ್ಗೆ ಆಲೌಟಾಯಿತು.
ಸಂಕ್ಷಿಪ್ತ ಸ್ಕೋರ್
ಗುಜರಾತ್ 145 ಹಾಗೂ 193 ರನ್(ಕವ್ಯಾ ಪಿ.ಪಟೇಲ್ 48, ವೇದ್ ಪಟೇಲ್ 30, ನಿಕಾಶ್ 4-56, ವೇದಾಂತ್ 3-36, ಪಾರ್ಸೂನ್ 3-47)
ಮುಂಬೈ ಮೊದಲ ಇನಿಂಗ್ಸ್: 376 ರನ್(ಸಾರ್ಥಕ್ ಭಿಡೆ 50, ಪರ್ಸೂನ್ ಸಿಂಗ್ 30, ಕವ್ಯಾ ಪಟೇಲ್ 4-46)