×
Ad

ಐಸಿಸಿ ಟೆಸ್ಟ್ ರ್‍ಯಾಂಕಿಂಗ್‌| ಕುಲದೀಪ್ ಜೀವನಶ್ರೇಷ್ಠ ಸಾಧನೆ, ಜೈಸ್ವಾಲ್, ರಾಹುಲ್‌ಗೆ ಭಡ್ತಿ

Update: 2025-10-15 20:51 IST

ಯಶಸ್ವಿ ಜೈಸ್ವಾಲ್ ,  ಕೆ.ಎಲ್. ರಾಹುಲ್ , ಕುಲದೀಪ ಯಾದವ್ | Photo Credit : PTI 

ದುಬೈ, ಅ.15: ವೆಸ್ಟ್‌ಇಂಡೀಸ್ ವಿರುದ್ಧ ಹೊಸದಿಲ್ಲಿಯಲ್ಲಿ ನಡೆದಿದ್ದ 2ನೇ ಪಂದ್ಯದಲ್ಲಿ 8 ವಿಕೆಟ್ ಗೊಂಚಲು ಪಡೆದಿದ್ದ ಭಾರತದ ಎಡಗೈ ಸ್ಪಿನ್ನರ್ ಕುಲದೀಪ ಯಾದವ್ ಬುಧವಾರ ಬಿಡುಗಡೆಯಾದ ಐಸಿಸಿ ಟೆಸ್ಟ್ ಬೌಲರ್‌ಗಳ ರ್‍ಯಾಂಕಿಂಗ್‌ನಲ್ಲಿ 14ನೇ ಸ್ಥಾನಕ್ಕೇರಿ ಜೀವನಶ್ರೇಷ್ಠ ಸಾಧನೆ ಮಾಡಿದ್ದಾರೆ.

ಕುಲದೀಪ್ 7 ಸ್ಥಾನಗಳಲ್ಲಿ ಭಡ್ತಿ ಪಡೆದರು. ವೆಸ್ಟ್‌ಇಂಡೀಸ್‌ನ ಜೋಮೆಲ್ ವಾರಿಕನ್ ಹಾಗೂ ನಾಯಕ ರೋಸ್ಟನ್ ಚೇಸ್ 2 ಹಾಗೂ 4 ಸ್ಥಾನಗಳಲ್ಲಿ ಭಡ್ತಿ ಪಡೆದು ಕ್ರಮವಾಗಿ 30ನೇ ಹಾಗೂ 57ನೇ ಸ್ಥಾನ ಪಡೆದರು.

ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ ಭಾರತ ತಂಡದ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ 2 ಸ್ಥಾನ ಮೇಲಕ್ಕೇರಿ 5ನೇ ಸ್ಥಾನ ತಲುಪಿದರು. ಕೆ.ಎಲ್. ರಾಹುಲ್ 2 ಸ್ಥಾನ ಮೇಲಕ್ಕೇರಿ 33ನೇ ಸ್ಥಾನದಲ್ಲಿದ್ದಾರೆ.    

2ನೇ ಟೆಸ್ಟ್‌ನ 2ನೇ ಇನಿಂಗ್ಸ್‌ನಲ್ಲಿ ಶತಕ ಗಳಿಸಿದ್ದ ವೆಸ್ಟ್‌ಇಂಡೀಸ್ ಬ್ಯಾಟರ್‌ಗಳಾದ ಶಾಯ್ ಹೋಪ್ (34 ಸ್ಥಾನ ಮೇಲಕ್ಕೇರಿ 66ನೇ ಸ್ಥಾನ)ಹಾಗೂ ಜಾನ್ ಕ್ಯಾಂಪ್‌ಬೆಲ್(6 ಸ್ಥಾನ ಮೇಲಕ್ಕೇರಿ 68ನೇ ಸ್ಥಾನ)ರ್ಯಾಂಕಿಂಗ್‌ನಲ್ಲಿ ಪ್ರಗತಿ ಸಾಧಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News