ಥಾಯ್ಲೆಂಡ್ ಮಾಸ್ಟರ್ಸ್: ಚೊಚ್ಚಲ ಪ್ರಶಸ್ತಿ ಗೆದ್ದ ದೇವಿಕಾ ಸಿಹಾಗ್
Picture Credit - Badminton Photo
ಹೊಸದಿಲ್ಲಿ, ಫೆ.1: ಭಾರತದ ಯುವ ಬ್ಯಾಡ್ಮಿಂಟನ್ ಆಟಗಾರ್ತಿ ದೇವಿಕಾ ಸಿಹಾಗ್ 250,000 ಯು.ಎಸ್. ಡಾಲರ್ ಬಹುಮಾನ ಮೊತ್ತದ ಥಾಯ್ಲೆಂಡ್ ಮಾಸ್ಟರ್ಸ್ ಟೂರ್ನಿಯಲ್ಲಿ ರವಿವಾರ ತನ್ನ ಚೊಚ್ಚಲ ಬಿಡಬ್ಲ್ಯುಎಫ್ ಸೂಪರ್-300 ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.
ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಎದುರಾಳಿ ಮಲೇಶಿಯಾದ ಗೋಹ್ ಜಿನ್ ವೀ ಗಾಯಗೊಂಡು ನಿವೃತ್ತಿಯಾದ ಹಿನ್ನೆಲೆಯಲ್ಲಿ 20ರ ಹರೆಯದ ಹರಿಯಾಣದ ಆಟಗಾರ್ತಿ ವಿಜಯಿಯಾದರು.
ವಿಶ್ವದ ನಂ.68ನೇ ಆಟಗಾರ್ತಿ ಜಿನ್ ವೀ ಮಂಡಿರಜ್ಜು ಗಾಯದಿಂದ ಪಂದ್ಯವನ್ನು ಮೊಟಕುಗೊಳಿಸಿದಾಗ ದೇವಿಕಾ 21-8, 6-3 ಮುನ್ನಡೆಯೊಂದಿಗೆ ಬಿಗಿ ಹಿಡಿತ ಹೊಂದಿದ್ದರು.
ಸದ್ಯ ವಿಶ್ವದ ನಂ.63ನೇ ಆಟಗಾರ್ತಿ ದೇವಿಕಾ ಬೆಂಗಳೂರಿನ ಪಡುಕೋಣೆ–ದ್ರಾವಿಡ್ ಸೆಂಟರ್ ಫಾರ್ ಸ್ಪೋರ್ಟ್ಸ್ ಎಕ್ಸಲೆನ್ಸ್‌ನಲ್ಲಿ ಉಮೇಂದ್ರ ರಾಣಾ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.
ದೇವಿಕಾ 2025ರ ಆಗಸ್ಟ್‌ನಲ್ಲಿ ಮಲೇಶ್ಯ ಇಂಟರ್‌ನ್ಯಾಷನಲ್ ಟೂರ್ನಿಯಲ್ಲಿ ತನ್ನ ಚೊಚ್ಚಲ ಅಂತರರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದಿದ್ದರು.