×
Ad

ಭಾರತ ವಿರುದ್ಧದ ಪಂದ್ಯ ಬಹಿಷ್ಕಾರ: ಪಾಕಿಸ್ತಾನ ನಿಲುವಿಗೆ ICC ತೀಕ್ಷ್ಣ ಪ್ರತಿಕ್ರಿಯೆ

Update: 2026-02-02 08:10 IST

PC: screengrab/x.com/Rajiv1841

ಹೊಸದಿಲ್ಲಿ: ICC ಪುರುಷರ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಫೆಬ್ರವರಿ 15ರಂದು ಭಾರತ ವಿರುದ್ಧ ನಡೆಯಬೇಕಿದ್ದ ಪಂದ್ಯವನ್ನು ಬಹಿಷ್ಕರಿಸುವ ಪಾಕಿಸ್ತಾನ ತಂಡದ ನಿಲುವಿನ ಬಗ್ಗೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಇದು ಜಾಗತಿಕ ಕ್ರಿಕೆಟ್‌ಗೆ ಸಂಬಂಧಿಸಿದ ಕಳವಳಕಾರಿ ಬೆಳವಣಿಗೆ ಎಂದು ICC ಅಭಿಪ್ರಾಯಪಟ್ಟಿದ್ದು, ಇದು ಪಾಕಿಸ್ತಾನ ಕ್ರಿಕೆಟ್ ಮೇಲೆ ದೀರ್ಘಾವಧಿಯ ಪರಿಣಾಮ ಬೀರುತ್ತದೆ ಎಂದು ಎಚ್ಚರಿಕೆ ನೀಡಿದೆ.

ಪಾಕಿಸ್ತಾನ ಸರ್ಕಾರದ ಘೋಷಣೆಯನ್ನು ICC ಅಧಿಕೃತ ಹೇಳಿಕೆಯಲ್ಲಿ ದೃಢಪಡಿಸಿದ್ದು, ಇಂತಹ ಆಯ್ದ ಭಾಗವಹಿಸುವಿಕೆಯು ಅಂತರರಾಷ್ಟ್ರೀಯ ಟೂರ್ನಿಯ ಮೂಲಭೂತ ಪರಿಕಲ್ಪನೆಗೆ ಹೊಂದಿಕೊಳ್ಳದು ಎಂದು ವಿಶ್ಲೇಷಿಸಿದೆ.

"2026ರ ICC ಪುರುಷರ ಟಿ20 ವಿಶ್ವಕಪ್‌ನಲ್ಲಿ ಆಯ್ದ ಭಾಗವಹಿಸುವಿಕೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ತಂಡಕ್ಕೆ ಸೂಚನೆ ನೀಡುವ ಪಾಕಿಸ್ತಾನ ಸರ್ಕಾರದ ಹೇಳಿಕೆಯನ್ನು ICC ಗಮನಿಸಿದೆ" ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ಕುರಿತು ಪಾಕಿಸ್ತಾನ ಕ್ರಿಕೆಟ್ ಮಂಡಳಿಯಿಂದ (PCB) ಅಧಿಕೃತ ಮಾಹಿತಿಯನ್ನು ICC ನಿರೀಕ್ಷಿಸುತ್ತಿದೆ ಎಂದು ಸ್ಪಷ್ಟಪಡಿಸಲಾಗಿದೆ.ಆದಾಗ್ಯೂ, ನಿಗದಿತ ಪಂದ್ಯವನ್ನು ತಪ್ಪಿಸಿಕೊಳ್ಳುವುದು ಜಾಗತಿಕ ಕೂಟದ ಮೂಲತತ್ವಗಳಿಗೆ ವಿರುದ್ಧವಾಗಿದೆ ಎಂದು ICC ಹೇಳಿದೆ.

ICC ಟೂರ್ನಿಗಳು ನ್ಯಾಯಸಮ್ಮತತೆ, ನಿಷ್ಠೆ ಮತ್ತು ಸಮಾನತೆಯ ತತ್ವಗಳ ಮೇಲೆ ನಿಂತಿವೆ ಎಂದು ಸಮರ್ಥಿಸಿಕೊಂಡಿದೆ.ಸರ್ಕಾರಗಳ ಪಾತ್ರವನ್ನು ICC ಗೌರವಿಸುತ್ತದೆ. ಆದರೆ ಈ ನಿರ್ಧಾರವು ಕ್ರೀಡೆ ಮತ್ತು ಅಭಿಮಾನಿಗಳಿಗೆ ನೋವು ತರುತ್ತದೆ ಎಂದು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News